fbpx
ಸಮಾಚಾರ

ಯಶ್‌ಗೆ ಸಿದ್ಧವಾಗಿದ್ದ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ.

ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮುಂದಿನ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈದೀಗ ಬಂದ ಬ್ರೇಕಿಂಗ್ ನ್ಯೂಸ್ ಎಂದರೆ ಪುರಿ ಜಗನ್ನಾಥ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ, ಬದಲಾಗಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ.

ಇಸ್ಮಾರ್ಟ್​ ಶಂಕರ್ ಸಿನಿಮಾ ಬ್ಲಾಕ್​ ಬಸ್ಟರ್ ಹಿಟ್​ ನಂತ್ರ ಪೂರಿ ಜಗನ್ನಾಥ್​​, ಜನಗಣಮನ ಚಿತ್ರ ಕೈಗೆತ್ತಿಕೊಳ್ಳೊ ಸುದ್ದಿ ಹೊರಬಂದಿತ್ತು. ಇದು ಅವ್ರ ಡ್ರೀಮ್​ ಪ್ರಾಜೆಕ್ಟ್. ಈ ಹಿಂದೆ ಮಹೇಶ್​ ಬಾಬು ಮತ್ತು ಪೂರಿ ಕಾಂಬಿನೇಷನ್​​ನಲ್ಲಿ ಈ ಸಿನಿಮಾ ಬರತ್ತೆ ಅನ್ನಲಾಗಿತ್ತು. ಬಟ್​ ಅದು ನಿಜವಾಗ್ಲೇಯಿಲ್ಲ. ಇತ್ತೀಚೆಗೆ ಅದೇ ಚಿತ್ರದಲ್ಲಿ ರಾಕಿಂಗ್​ ಸ್ಟಾರ್ ಯಶ್​ ಹೀರೋ ಆಗಿ ನಟಿಸ್ತಾರೆ. ಈ ಬಗ್ಗೆ ಈಗಾಗಲೇ ಇಬ್ಬರೂ ಮಾತುಕತೆ ನಡೆಸಿದ್ದಾರೆ ಅಂತೆಲ್ಲಾ ಸುದ್ದಿಯಾಯ್ತು. ಕೆಜಿಎಫ್​-2 ನಂತ್ರ ಯಶ್​​-ಪೂರಿ ಜನಗಣಮನ ಹಾಡ್ತಾರೆ ಅಂತ್ಲೇ ಎಲ್ಲಾ ಅಂದುಕೊಂಡಿದ್ರು.. ಆದರೆ ಈಗ ಪೂರಿ ತಮ್ಮ ಹೊಸ ಸಿನಿಮಾಗೆ ವಿಜಯ್​ ಅವರ ಹೆಸರನ್ನು ಪ್ರಕಟಿಸಿದ್ದಾರೆ.

 

 


 

ಈ ಬಗ್ಗೆ ನಟಿ ಕಮ್ ಚಿತ್ರ ನಿರ್ಮಾಪಕಿ ಚಾರ್ಮಿ ಕೌರ್ ಈ ಬಗ್ಗೆ ಟ್ವಿಟ್ ಮಾಡಿ, ಪುರಿ ಜಗನ್ನಾಥ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಜೊತೆ ನಮ್ಮ ಮುಂದಿನ ಪ್ರಾಜೆಕ್ಟ್ ಮಾಡುತ್ತಿದ್ದೇವೆ. ಪುರಿ ಕನೆಕ್ಟ್ಸ್, ಪುರಿ ಜಗನ್ನಾಥ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿದೆ. ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಿದ್ದೇವೆ ಎಂದಿದ್ದಾರೆ.

ಅಲ್ಲಿಗೆ ಈ ಹೊಸ ಸಿನಿಮಾವನ್ನು ಚಾರ್ಮಿ ಹಾಗೂ ಪೂರಿ ಜಗನ್ನಾಥ್​ ಅವರೇ ನಿರ್ಮಿಸುತ್ತಿದ್ದು, ವಿಜಯ್​ ದೇವರಕೊಂಡ ಇದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದಲ್ಲಿ ವಿಜಯ್​ ಅವರಿಗಾಗಿಯೇ ಪೂರಿ ವಿಶೇಷ ಪಾತ್ರವನ್ನು ಸಿದ್ಧಪಡಿಸಿಕೊಂಡಿದ್ದಾರಂತೆ. ವಿಜಯ್​ ಈ ಹಿಂದೆ ಮಾಡದಂತಹ ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಅನ್ನೋ ಸುದ್ದಿ ಟಾಲಿವುಡ್​ ಗಲ್ಲಿಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top