fbpx
ಭವಿಷ್ಯ

ಸೆಪ್ಟೆಂಬರ್ 07: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಶುಕ್ರವಾರ, ಸೆಪ್ಟೆಂಬರ್ 07 2019
ಸೂರ್ಯೋದಯ : 6:08 am
ಸೂರ್ಯಾಸ್ತ: 6:26 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಭಾದ್ರಪದ
ಪಕ್ಷ : ಶುಕ್ಲಪಕ್ಷ
ತಿಥಿ :ನವಮೀ 21:22
ನಕ್ಷತ್ರ: ಮೂಲ ಪೂರ್ಣ ರಾತ್ರಿ
ಯೋಗ :ಪ್ರೀತಿ 16:51
ಕರಣ: ಬಾಲವ 08:57 ಕುಲವ 21:22

ಅಭಿಜಿತ್ ಮುಹುರ್ತ:11:53 am – 12:42 pm
ಅಮೃತಕಾಲ : 11:41 pm – 1:23 am

ರಾಹುಕಾಲ- 9:14 am – 10:46 am
ಯಮಗಂಡ ಕಾಲ- 1:49 pm – 3:20 pm
ಗುಳಿಕ ಕಾಲ- 6:12 am – 7:43 am

 

 

 

ಮೇಷ (Mesha)

 

 

 

ನಿಮ್ಮನ್ನು ಸುಮ್ಮನೆ ಒತ್ತಡದಲ್ಲಿರಿಸುವ ಕಾರ್ಯತಂತ್ರವನ್ನು ರೂಪಿಸುವ ಗೆಳೆಯರಿಂದ ದೂರವಿರಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಅಧಿಕ ಲಾಭ ಅಥವಾ ನೆಮ್ಮದಿ ಉಂಟಾಗುವುದು. ಗುರುರಾಯರನ್ನು ಸ್ಮರಿಸಿ.

 

 

ವೃಷಭ (Vrushabh)

 

ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿರುವ ನಿಮ್ಮನ್ನು ಕಂಡು ಇತರರು ಅಸೂಯೆ ಪಡುವರು. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ತಲ್ಲೀನರಾಗಿ.

 

ಮಿಥುನ (Mithuna)

 

ಉತ್ತಮ ಹಣಕಾಸಿನ ಸ್ಥಿತಿಯಿದ್ದು ಬಂಡವಾಳ ಹೂಡಿಕೆಯ ವಿಚಾರದಲ್ಲಿ ಮುಂದುವರಿಯಬಹುದು. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ. ತಾಯಿಗೆ ಅಲ್ಪ ಅನಾರೋಗ್ಯ ಕಾಡುವುದು.

 

ಕರ್ಕ (Karka)

 

ವಿದೇಶ ಪ್ರವಾಸ ಅಥವಾ ದೂರ ಪ್ರವಾಸದ ಸಾಧ್ಯತೆ ಇರುವುದು. ಬಂಧುಗಳ ಹಾಗೂ ಹಿತೈಷಿಗಳ ಭೇಟಿಯ ಸಾಧ್ಯತೆ ಇದೆ. ಮಹತ್ತರ ಕಾರ್ಯಕ್ಕೆ ಸಾಕ್ಷಿಯಾಗುವಿರಿ. ತಾಯಿಯ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ.

 

ಸಿಂಹ (Simha)

 

ಕಠಿಣ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ ಮತ್ತು ಯಾವುದು ಪುಕ್ಕಟೆಯಾಗಿ ದೊರೆಯದು ಎನ್ನುವ ಕಟು ಸತ್ಯ ನಿಮಗೆ ಈಗಾಗಲೇ ಮನವರಿಕೆ ಆಗಿರುವುದು. ಹಣಕಾಸಿನ ಪರಿಸ್ಥಿತಿ ಸುಧಾರಿಸಲು ಕನಕಧಾರಾ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.

 

ಕನ್ಯಾರಾಶಿ (Kanya)

 

ತುರ್ತು ಕಾರ್ಯ ನಿರ್ವಹಣೆಗಾಗಿ ಸಾಲ ಮಾಡಬೇಕಾಗುವುದು. ಬಂಧುಗಳು ಸಹ ನಿಮ್ಮ ಈ ಪರಿಸ್ಥಿತಿಯಲ್ಲಿ ಸಹಾಯ ಮಾಡಲು ಹಿಂದೇಟು ಹಾಕುವರು.ನಿಮಗೆ ಧೈರ್ಯವನ್ನು ತುಂಬುವ ಮತ್ತು ಸಕಾರಾತ್ಮಕವಾಗಿ ಚಿಂತಿಸುವ ಜನರ ಸಂಪರ್ಕವನ್ನು ಹೊಂದಿ.

 

ತುಲಾ (Tula)

 

ಸಂಕಷ್ಟಗಳನ್ನು ಎದುರಿಸುವ ಕಲೆಗಾರಿಕೆ ನಿಮಗೆ ಹೇಳಿಕೊಡಬೇಕಾಗಿಲ್ಲ. ಎಲ್ಲವನ್ನು ನಗುನಗುತ್ತಲೇ ನಿಭಾಯಿಸುವ ಗುಣ ಅನುಕರಣಿಯವಾದುದು. ಆದರೆ ನಿಮ್ಮ ಮನೆ ಮಂದಿಯೇ ನಿಮ್ಮನ್ನು ಆಡಿಕೊಳ್ಳುವುದು ನಿಮಗೆ ನುಂಗಲಾರದ ತುತ್ತಾಗುವುದು.

 

ವೃಶ್ಚಿಕ (Vrushchika)

 

ಹಿತಶತ್ರುಗಳು ನಿಮ್ಮ ನೆಮ್ಮದಿಯನ್ನು ಕೆಡಿಸುವ ಹುನ್ನಾರದಲ್ಲಿದ್ದಾರೆ ಮತ್ತು ನಿಮ್ಮ ತಪ್ಪುಗಳನ್ನು ಎತ್ತಿ ಆಡುವರು. ಇದರಿಂದ ಕೋಪಗೊಳ್ಳುವ ನೀವು ಮಾತಿನ ಭರದಲ್ಲಿ ಸತ್ಯವನ್ನು ನುಡಿದು ಪೇಚಿಗೆ ಸಿಲುಕೊಳ್ಳುವಿರಿ. ತಾಳ್ಮೆಯಿಂದ ಇರಿ.

 

ಧನು ರಾಶಿ (Dhanu)

 

ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರುವುದು ಕ್ಷೇಮ. ಪ್ರಯಾಣದಲ್ಲಿ ವಾಹನವನ್ನು ಚಲಿಸುವಾಗ ಎಡ ಮತ್ತು ಬಲಬದಿಯ ವಾಹನಗಳನ್ನು ಗಮನಿಸಿ. ಸ್ನೇಹಿತರ ಸಕಾಲಿಕ ಎಚ್ಚರಿಕೆಯಿಂದ ನಿಮಗೆ ಒಳಿತಾಗುವುದು.

 

ಮಕರ (Makara)

 

ಕಾರಣವಿರದ ಚಿಂತೆ ಹಾಗೂ ಖಿನ್ನತೆಗಳನ್ನು ಬಿಟ್ಟು ಗೆಳೆಯರೊಂದಿಗೆ ಚರ್ಚಿಸಿ. ಒಳಿತಿನ ದಾರಿ ನಿಮಗೆ ಗೋಚರವಾಗುವುದು. ಆಂಜನೇಯ ದೇವಸ್ಥಾನಕ್ಕೆ ತಪ್ಪದೇ ಹೋಗಿ ಬನ್ನಿ. ಭಗವಂತ ನಿಮಗೆ ಅಭಯ ನೀಡುವನು.

 

ಕುಂಭರಾಶಿ (Kumbha)

 

ನಿಮ್ಮ ಕೆಲಸ ಕಾರ್ಯಗಳನ್ನು ಸಾರ್ಥಕವಾಗಿಸಲು ನಿಮ್ಮ ಮಕ್ಕಳು ನಿಮಗೆ ಸಹಕಾರಿಯಾಗಿ ನಿಲ್ಲುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಬೆಳ್ಳಗೆ ಇರುವುದೆಲ್ಲಾ
ಹಾಲು ಎಂದು ನಂಬಿ ಮೋಸ ಹೋಗದಿರಿ.

 

ಮೀನರಾಶಿ (Meena)

 

ಮನಸ್ಸಿನ ತಲ್ಲಣಗಳಿಂದ ಮುಕ್ತಿ ಹೊಂದಲು ಕುಲದೇವರ ಪ್ರಾರ್ಥನೆ ಮಾಡಿ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವುದು. ಶ್ರಮವಹಿಸಿ ಮಾಡುವ ಕೆಲಸಗಳಿಗೆ ವಿಘ್ನ ಬರುವ ಸಾಧ್ಯತೆ ಇದೆ. ಗಣಪತಿ ಪ್ರಾರ್ಥನೆ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top