fbpx
ಸಮಾಚಾರ

ಡಿಕೆಶಿ ಬಂಧನ ವಿಚಾರ:ಭಾರೀ ಪ್ರತಿಭಟನೆಗೆ ಒಕ್ಕಲಿಗರ ಸಂಘ ನಿರ್ಧಾರ!

ದೆಹಲಿ ನಿವಾಸದಲ್ಲಿ ಅಕ್ರಮ ಹಣ ದೊರೆತ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಸೆ. 13ರ ವರೆಗೆ ಡಿಕೆ ಶಿವಕುಮಾರ್​ ಅವರನ್ನು ಕೋರ್ಟ್​ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ದೆಹಲಿ ನಿವಾಸದಲ್ಲಿ 8.5 ಕೋಟಿ ರೂಪಾಯಿ ದೊರೆತ ಪ್ರಕರಣ ಸಂಬಂಧ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

 

 

ಈ ನಡುವೆ ಡಿಕೆಶಿಯ ಬಂಧನವನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದೀಗ ರಾಜ್ಯ ಒಕ್ಕಲಿಗರ ಸಂಘಗಳ ಒಕ್ಕೂಟ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಬಂಧನ ವಿರೋಧಿಸಿ ಒಕ್ಕಲಿಗರ ಸಂಘ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ. ಸೆಪ್ಟಂಬರ್ 7 ರಂದು ಬುಧವಾರ ರಾಜ್ಯ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ನಿಂದ ಪ್ರತಿಭಟನೆಯನ್ನು ಆರಂಭಿಸಲಿದೆ.

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರ ಆತ್ಮಹತ್ಯೆಗೆ ಆದಾಯ ತೆರಿಗೆ ಇಲಾಖೆ ಕಾರಣ ಎಂದು ಒಕ್ಕಲಿಗರ ಸಂಘ ಆರೋಪಿಸಿದೆ, ಶಿವಕುಮಾರ್ ಅವರು ರಾಜಕೀಯ ಸಂತ್ರಸ್ತ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಬಿಂಬಿಸುತ್ತಿವೆ, ಇನ್ನೂ ಬಿಜೆಪಿ ಅಧಿಕಾರಕ್ಕೆ ಬರಲು ಸಮ್ಮಿಶ್ರ ಸರ್ಕಾರ ಕೆಡವಿದ್ದಕ್ಕೆ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತ ಪಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top