fbpx
ಸಮಾಚಾರ

“ಪೈಲ್ವಾನ್ ರೀತಿಯ ಸ್ಪೂರ್ತಿದಾಯಕ ಸಿನಿಮಾಗಳು ಹೆಚ್ಚೆಚ್ಚು ಬರಬೇಕು” ವಿಶ್ವ ಚಾಂಪಿಯನ್ ಪಿ.ವಿ ಸಿಂಧು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಸ್ಖಿತ ‘ಪೈಲ್ವಾನ್’ ಸಿನೆಮಾದ ತೆಲುಗು ಅವತರಣಿಕೆಯ ಪ್ರಿ-ರಿಲೀಸ್ ಇವೆಂಟ್ ಹೈದರಾಬಾದ್‌ನ ಜೆಆರ್‌ಸಿ ಕನ್ವೆನ್ಶನ್ ಹಾಲ್‌ನಲ್ಲಿ ಶುಕ್ರವಾರ ಸಂಜೆ ನಡೆಯಿತು. ಈ ಕಾರ್ಯಕ್ರಮಕ್ಕೆ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ, ವಿಶ್ವ ಚಾಂಪಿಯನ್ ವಿ.ಪಿ.ಸಿಂಧು ಆಗಮಿಸಿದ್ದು, ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಈ ವೇಳೆ ಚಿತ್ರದ ಕುರಿತಾಗಿ ಮಾತನಾಡಿದ ಸಿಂಧು “ಪೈಲ್ವಾನ್’ನಂತಹ ಸಿನೆಮಾಗಳು ಜನರನ್ನು ಹೆಚ್ಚು ಪ್ರೇರೇಪಿಸುತ್ತವೆ. ಪೈಲ್ವಾನ್ ರೀತಿಯ ಸ್ಪೂರ್ತಿದಾಯಕ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಕಠಿಣ ಶ್ರಮವೊಂದೇ ಯಶಸ್ಸಿನ ಸೂತ್ರ. ‘ಪೈಲ್ವಾನ್’ ಟ್ರೇಲರ್ ನೋಡಿದರೆ ಈ ಪಾತ್ರಕ್ಕಾಗಿ ಸುದೀಪ್ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುವುದು ತಿಳಿಯುತ್ತದೆ.. ಇಡೀ ತಂಡಕ್ಕೆ ಒಳ್ಳೆಯದಾಗಲಿ. ” ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಶುಭಕೋರಿದ್ದಾರೆ.

ಇನ್ನು ಸಿಂಧು ಜತೆಗಿನ ಫೋಟೋ ಶೇರ್ ಮಾಡಿಕೊಂಡಿರುವ ಕಿಚ್ಚ ಸುದೀಪ್ ನಿಮ್ಮನ್ನು ಭೇಟಿಯಾಗಿದ್ದು ಗೌರವ ತಂದಿದೆ ಎಂದಿದ್ದಲ್ಲದೆ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇದಕ್ಕೆ ಸಿಂಧು ಕೂಡ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘ಸುದೀಪ್‌ ಸರ್‌ ನಿಮ್ಮನ್ನು ಭೇಟಿ ಮಾಡಿದ್ದು ನನಗೆ ಖುಷಿಯಾಗಿದೆ. ಪೈಲ್ವಾನ್‌ ಚಿತ್ರದ ನಿರ್ಮಾಣದ ಹಿಂದೆ ದೊಡ್ಡ ಶ್ರಮವಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಕೋರಿದ್ದಾರೆ.

ಅಂದಹಾಗೆ ಪೈಲ್ವಾನ್ ಸಿನಿಮಾ ಸೆಪ್ಟೆಂಬರ್ 12ರಂದು ಬಿಡುಗಡೆಯಾಗುತ್ತಿದ್ದು ಅಡ್ವಾನ್ಸ್ ಬುಕಿಂಗ್ ಕೂಡ ಅದಾಗಲೇ ಆನ್ ಲೈನ್ ನಲ್ಲಿ ಓಪನ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top