fbpx
ಸಮಾಚಾರ

“ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ದಂಡ ಹಾಕಲ್ಲ, ದಯವಿಟ್ಟು ಪ್ರತಿಕ್ರಿಯಿಸು” ವಿಕ್ರಮ್ ಲ್ಯಾಂಡರ್ ಗೆ ಪೊಲೀಸರ ಸಂದೇಶ

ಕೊನೆಯ ಕ್ಷಣದಲ್ಲಿ ತನ್ನ ಪಥ ಬದಲಿಸಿದ ಚಂದ್ರಯಾನ -2 ಯೋಜನೆಯ ಲ್ಯಾಂಡರ್ ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡ ನಂತರ ದೇಶ ವಿದೇಶಗಳ ಜನರು ತಮ್ಮ ದುಃಖ, ನಿರಾಸೆ, ನೋವು, ಆಶಾಭಾವನೆ, ನಿರೀಕ್ಷೆ ಹಾಗೂ ಪ್ರೋತ್ಸಾಹ ಮಾತುಗಳನ್ನಾಡುತ್ತಿದ್ದರೆ, ನಾಗಪುರ ಪೊಲೀಸರು ವಿಭಿನ್ನವಾಗಿ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

 

 

ನಾಗ್ಪುರ ಸಿಟಿ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಿಂದ ಈ ಟ್ವೀಟ್ ಮಾಡಲಾಗಿದೆ. ‘‘ಪ್ರೀತಿಯ ವಿಕ್ರಮ್​, ದಯವಿಟ್ಟು ನಮಗೆ ಸಹಕರಿಸು. ನೀನು ಸಿಗ್ನಲ್​ ಬ್ರೇಕ್ ಮಾಡಿರುವುದರಿಂದ ನಾವು ನಿಮಗೆ ಯಾವುದೇ ರೀತಿಯ ಚಲನ್ ವಿಧಿಸಲ್ಲ, ದಯವಿಟ್ಟು ಸ್ಪಂದಿಸು’’ ಅಂತಾ ಟ್ವೀಟ್ ಮಾಡಿದ್ದಾರೆ.

ಇನ್ನು ಪೊಲೀಸರ ಈ ಟ್ವೀಟ್​ಗೆ ಪ್ರತಿಕ್ರಿಯಿಸುತ್ತಿರುವ ನೆಟ್ಟಿಗರು, ಸಿಗ್ನಲ್​ ಬ್ರೇಕ್ ಮಾಡಿರುವ ವಿಕ್ರಮ್​ನಿಂದ ಯಾವುದಾದ್ರೂ ಪ್ರತಿಕ್ರಿಯೆ ಸಿಕ್ಕರೆ, ನನಗೆ ಹೇಳಿ. ವಿಕ್ರಮ್ ಪರವಾಗಿ ನಾನು ದಂಡ ಕಟ್ಟುತ್ತೇನೆ ಅಂತಾ ಹೇಳ್ತಿದ್ದಾರೆ. ಇನ್ನೂ ಕೆಲವರು, ವಿಕ್ರಮ್ ನಿಮ್ಮ ವ್ಯಾಪ್ತಿ ಪ್ರದೇಶದಲ್ಲಿ ಇಲ್ಲಬಿಡಿ ಎಂದು ನೆಟ್ಟಿಗರು ತಮಾಷೆಯ ಉತ್ತರ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top