fbpx
ಸಮಾಚಾರ

ಜನರಿಗಾಗಿ ಕಚೇರಿ ಬಾಗಿಲನ್ನು ಮುಕ್ತವಾಗಿ ತೆರೆದ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರಿಗೆ ಸಾರ್ವಜನಿಕರಿಂದ ಮೆಚ್ಚುಗೆ!

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಸಾರ್ವಜನಿಕರು ಭೇಟಿ ಮಾಡಬೇಕೆಂದರೆ ಪರ್ಮಿಶನ್, ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯ ಜನರಲ್ಲಿ ಇದೆ.. ಆದರೆ ಈ ವಿಚಾರದಲ್ಲಿ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮನಿವಣ್ಣನ್ ಅವರು ಜನರ ಈ ಅಭಿಪ್ರಾಯವನ್ನು ಬದಲಿಸಲು ಮುಂದಾಗಿದ್ದಾರೆ.

 

 

ಹೌದು, ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅವರು ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಿಇದ್ದಾರೆ. ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಯಾವುದೇ ಪೂರ್ವ ಅನುಮತಿಯಿಲ್ಲದೇ ತಮ್ಮ ಕಚೇರಿಗೆ ಆಗಮಿಸುವಂತೆ ಕ್ಯಾಪ್ಟನ್ ಮಣಿವಣ್ಣನ್ ತಮ್ಮ ಕಚೇರಿಯ ಮುಂಬಾಗಿ ಫಲಕವನ್ನು ಹಾಕಿಸಿದ್ದಾರೆ.

“ಮದ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಸಮಯದಲ್ಲಿ ಯಾವುದೇ ಅನುಮತಿಯಿಲ್ಲದೇ ನೇರವಾಗಿ ಭೇಟಿ ಮಾಡಬಹುದು. ಒಂದು ವೇಳೆ ನಾನು ಕಚೇರಿಯಲ್ಲಿ ಇರದಿದ್ದರೆ ದಯವಿಟ್ಟು ನನ್ನ ಮೊಬೈಲ್ ಸಂಖ್ಯೆ 9632060006 ಗೆ ವಾಟ್ಸಾಪ್ ಸಂದೇಶ ಕಳುಹಿಸಬಹುದು” ಎಂದು ಕಚೇರಿಯ ಮುಂದೆ ಹಾಕಲಾಗಿರುವ ಸೂಚನೆ ಪತ್ರದಲ್ಲಿ ಬರೆಯಲಾಗಿದೆ.

 

 

ಕ್ಯಾಪ್ಟನ್ ಮಣಿವಣ್ಣನ್ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಇತರ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಕೂಡ ಈ ಮಾರ್ಗವನ್ನು ಅನುಸರಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top