fbpx
ಸಮಾಚಾರ

ಶೆಡ್‌ ಹೊಟೇಲ್‌ನಲ್ಲಿ ದೊಸೆ ಸವಿದ ಸರಳತೆಯ ಸಾಮ್ರಾಟ್ ಶಿವರಾಜ್‌ ಕುಮಾರ್

ಸ್ಟಾರ್ ನಟರು ಎಂದರೆ ಕೇವಲ ಫೈಸ್ಟಾರ್ ಹಾಗೂ ಐಷಾರಾಮಿ ಹೊಟೇಲ್‍ಗಳಲ್ಲಿ ಮಾತ್ರ ಊಟ-ತಿಂಡಿ ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಇದಕ್ಕೆ ವಿಭಿನ್ನ ಎಂಬಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಶೆಡ್ ಹೊಟೇಲ್‍ವೊಂದರಲ್ಲಿ ತಿಂಡಿ ತಿನ್ನುವ ಮೂಲಕ ನನಗೂ ಸಾಮಾನ್ಯ ಜನರಂತೆ ಬದುಕಲು ಇಷ್ಟ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಅವರು ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ಸು ಬರುವಾಗ ಮಳವಳ್ಳಿ ಬಳಿಯ ಹಲಗೂರಿನ ಬಾಬು ಎಂಬುವವರ ರಸ್ತೆ ಬದಿಯ ಹೋಟೆಲ್‌ಗೆ ತೆರಳಿ ದೋಸೆ ರುಚಿ ಸವಿದಿದ್ದಾರೆ.

ತಿಂಡಿ ತಿಂದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಚಿತ್ರನಟ ಶಿವರಾಜ್‌ ಕುಮಾರ್‌, ಮನೆ ದೇವರಾದ ಮುತ್ತತ್ತಿರಾಯನ ಸನ್ನಿಧಿಗೆ ಬರುವುದು ನಮ್ಮ ಪದ್ಧತಿ. ಮುತ್ತತ್ತಿ ಬಂದ ವೇಳೆ ಹೋಟೇಲ್‌ಗೆ ಭೇಟಿ ನೀಡುತ್ತೇನೆ. ಇಲ್ಲಿ ದೋಸೆ ತಿಂದು ಹೋಗುತ್ತೇನೆ. ಇಂದು ಮಲೈ ಮಹಾದೇಶ್ವರ ಸ್ವಾಮಿ ಬೆಟ್ಟಕ್ಕೆ ಹೋಗುತ್ತಿದ್ದೆ. ಹೋಟೆಲ್‌ ಮಾಲೀಕ ಬಾಬು ರುಚಿಕರವಾದ ತಿಂಡಿ ನೀಡುತ್ತಾರೆ. ಬೆಣ್ಣೆದೋಸೆ ತಿಂದು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top