fbpx
ಸಮಾಚಾರ

ಸೆಪ್ಟೆಂಬರ್ 10: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಶುಕ್ರವಾರ, ಸೆಪ್ಟೆಂಬರ್ 07 2019
ಸೂರ್ಯೋದಯ : 6:08 am
ಸೂರ್ಯಾಸ್ತ: 6:24 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಭಾದ್ರಪದ
ಪಕ್ಷ : ಶುಕ್ಲಪಕ್ಷ
ತಿಥಿ :ದ್ವಾದಶೀ 26:42
ನಕ್ಷತ್ರ:ಉತ್ತರಾಷಾಢ 11:10
ಯೋಗ :ಶೋಭನ 17:47
ಕರಣ:ಬಾವ 13:34 ಬಾಲವ 26:42

ಅಭಿಜಿತ್ ಮುಹುರ್ತ: 11:52 am – 12:40 pm
ಅಮೃತಕಾಲ : 2:22 am – 4:10 am

ರಾಹುಕಾಲ-3:18 pm – 4:50 pm
ಯಮಗಂಡ ಕಾಲ- 9:14 am – 10:45 am
ಗುಳಿಕ ಕಾಲ- 12:16 pm – 1:47 pm

 

 

ಮೇಷ (Mesha)

ಮನೆಯಲ್ಲಿ ಮಂಗಳ ಕಾರ್ಯದ ಮಾತುಕತೆಯು ಫಲಪ್ರದವಾಗುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ. ಮಕ್ಕಳ ಪ್ರಗತಿಯು ಸಂತಸವನ್ನುಂಟು ಮಾಡುವುದು. ದೈವಿ ಪುರುಷರ ದರ್ಶನದಿಂದ ಧನ್ಯತೆಯ ಭಾವ ಮೂಡುವುದು.

ವೃಷಭ (Vrushabh)


ಹಮ್ಮಿಕೊಂಡ ಕಾರ್ಯದಲ್ಲಿ ಗೊಂದಲಗಳು ಉಂಟಾಗುವುದು. ಈಗಿರುವ ಜವಾಬ್ದಾರಿ ಕೆಲಸದಿಂದ ವಿಮುಕ್ತರಾಗಲು ಚಿಂತಿಸುವಿರಿ. ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಎನ್ನುವಂತೆ, ಊರ ತುಂಬಾ ಗೆಳೆಯರು ಬಂಧುಗಳು ಇದ್ದರೂ ಸಹ ನಿಮ್ಮ ಕಷ್ಟಕಾಲದಲ್ಲಿ ಯಾರೂ ಸಹಾಯ ಮಾಡದಿರುವುದೇ ಶನಿ ಪರಮಾತ್ಮನ ಪ್ರಭಾವವಾಗಿದೆ.

ಮಿಥುನ (Mithuna)


ಗ್ರಹಗಳ ಸ್ಥಿತಿಯಿಂದಾಗಿ ನಿಮಗೆ ಬರಬೇಕಾಗಿದ್ದ ಹಣಕಾಸು ಬರದೆ ಹೋಗುವ ಸಾಧ್ಯತೆ. ಸಾಲ ಕೊಟ್ಟವರು ನಿಮ್ಮನ್ನು ಈದಿನ ಬಹುವಾಗಿ ಪೀಡಿಸುವ ಸಾಧ್ಯತೆ. ಕುಲದೇವರ ಪ್ರಾರ್ಥನೆ ಮಾಡಿರಿ.

ಕರ್ಕ (Karka)


ನಿಮ್ಮ ಕಾರ್ಯ ಯೋಜನೆಗಳನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರುತ್ತೀರಿ. ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡುವಿರಿ. ಮನೆಯಲ್ಲಿ ಸಂತಸದ ವಾತಾವರಣ. ಆರ್ಥಿಕವಾಗಿ ಸದಢರಾಗಿರುವಿರಿ. ಆರೋಗ್ಯದ ಕಡೆ ಗಮನ ಹರಿಸುವುದ ಒಳ್ಳೆಯದು.

ಸಿಂಹ (Simha)


ಬಂಧು ಬಾಂಧವರಿಂದ ಕಷ್ಠದ ಕಾಲದಲ್ಲಿ ಸಹಾಯ ಪಡೆಯುವಿರಿ. ಮತ್ತು ಸ್ನೇಹಿತರು ನಿಮಗೆ ಇಂದು ಮಾರ್ಗದರ್ಶಕರಾಗುವುದರಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ.

ಕನ್ಯಾರಾಶಿ (Kanya)


ಕೆಲವು ಕಾರ್ಯಗಳಲ್ಲಿ ಹಿನ್ನಡೆಯನ್ನು ಆನುಭವಿಸುವಿರಿ. ಲೇವಾದೇವಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸದಿರುವುದು ಉತ್ತಮ ಮತ್ತು ಹಣಕಾಸಿನ ವಿಷಯದಲ್ಲಿ ಜಾಮೀನ್‌ಗೆ ಸಹಿ ಹಾಕದಿರುವುದು ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರ ಅಗತ್ಯ.

ತುಲಾ (Tula)


ಕಲೆಗೆ ಸಂಬಂಧಿಸಿದವರಿಗೆ ಇಂದು ಶುಭಕಾಲ. ಅಂತೆಯೇ ಬರಹಗಾರರಿಗೆ ವಕೀಲರಿಗೆ ಉತ್ತಮ ಕಾಲ. ತಮ್ಮ ಕಾರ್ಯಕ್ಷೇತ್ರದಲ್ಲಿ ಗೌರವ ಮರ್ಯಾದೆಯನ್ನು ಹೊಂದುವರು. ಹಣಕಾಸಿನ ವಿಚಾರದಲ್ಲಿ ಕೈಹಿಡಿತ ಮಾಡುವುದು ಕ್ಷೇಮಕರ.

ವೃಶ್ಚಿಕ (Vrushchika)


ಮನೆಯಲ್ಲಿ ಸಂಭ್ರಮ ಸಂತಸದ ವಾತಾವರಣ. ಬಂಧುಬಾಂಧವರ ಸಮಾಗಮವು ನಿಮಗೆ ನವಚೈತನ್ಯವನ್ನು ತುಂಬುವುದು. ಲೇಖಕರಿಗೆ, ಮಾರ್ಗದರ್ಶಕರಿಗೆ ಉತ್ತಮ ದಿನ. ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು.

ಧನು ರಾಶಿ (Dhanu)


ಕೆಲಸದ ಒತ್ತಡಗಳಲ್ಲಿ ಸಿಟ್ಟಿನಿಂದ ಮಾತನಾಡುವಿರಿ. ಇದರಿಂದ ನಿಮ್ಮ ಸುತ್ತಮುತ್ತಲಿನ ವಾತಾವರಣ ಕೆಟ್ಟುಹೋಗುವುದು. ಆದಷ್ಟು ತಾಳ್ಮೆಯಿದ್ದರೆ ಒಳ್ಳೆಯದು. ತಾಳಿದವನು ಬಾಳಿಯಾನು ಎಂಬುದನ್ನು ಮರೆಯದಿರಿ.

ಮಕರ (Makara)


ಇದು ಪರಿವರ್ತನೆಯ ಸಮಯ. ಶುರುವಿನಲ್ಲಿ ನಿಮಗೆ ಕಿರಿಕಿರಿ ಅನ್ನಿಸಬಹುದು. ಆದರೆ ಭವಿಷ್ಯದ ದಷ್ಠಿಯಿಂದ ನಿಮಗಿದು ಯಶಸ್ಸಿನ ದೊಡ್ಡ ಮೆಟ್ಟಿಲು. ಅವಿವಾಹಿತರಿಗೆ ಸಂಗಾತಿಯ ಆಯ್ಕೆಯ ಅವಕಾಶಗಳು ಲಭಿಸುವುದು.

ಕುಂಭರಾಶಿ (Kumbha)


ನಿಮ್ಮ ಮಾತಿನ ಧಾಟಿಯಲ್ಲಿ ಬದಲಾವಣೆಯನ್ನು ಅವಶ್ಯಕವಾಗಿ ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ನಿಮ್ಮ ಗೆಳೆಯರಿಂದ ದೂರ ಉಳಿಯುವ ಸಾಧ್ಯತೆ ಇದೆ. ಎಲ್ಲರೊಡನೆ ಬೆರೆತು ಹೆಚ್ಚಿನ ಜ್ಞಾನ ಸಂಪಾದನೆ ಮಾಡಿಕೊಳ್ಳಿರಿ.

ಮೀನರಾಶಿ (Meena)


ಮನೆಯಲ್ಲಿನ ಶುಭ ಕಾರ್ಯಗಳಿಗೆ ಇಂದು ಮುಹೂರ್ತ ಚೆನ್ನಾಗಿದೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸೂಚನೆ ಸಿಗಲಿದೆ. ದೂರದಿಂದ ಬರುವ ವಾರ್ತೆಯು ಮನೆಯಲ್ಲಿ ಹೊಸ ಸಂಚಲನವನ್ನು ಹುಟ್ಟು ಹಾಕುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top