fbpx
ಸಮಾಚಾರ

ನಿರ್ದೇಶಕನೊಂದಿಗೆ ಉಪೇಂದ್ರ ಕಿರಿಕ್?: ಬುದ್ಧಿವಂತ-2 ಚಿತ್ರತಂಡದಿಂದ ನಿರ್ದೇಶಕ ಹೊರಬಂದಿದ್ದೇಕೆ?

ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯ ‘ಬುದ್ಧಿವಂತ-2 ಚಿತ್ರದ ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಐ ಲವ್ ಯು ಚಿತ್ರದ ನಂತರ ರಿಯಲ್ ಸ್ಟಾರ್ ಅಭಿನಯಿಸುತ್ತಿರುವ ಸಿನಿಮಾ ‘ಬುದ್ಧಿವಂತ-2. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿ ದಿನಗಳಾಗಿತ್ತು. ಆದ್ರೀಗ ಚಿತ್ರದಿಂದ ದೊಡ್ಡ ಬ್ರೇಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ಧಿವಂತ 2 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿದ್ದ ನವ ನಿರ್ದೇಶಕ ಮೌರ್ಯ ಚಿತ್ರದಿಂದ ಹೊರಬಂದಿದ್ದಾರೆ. 20 ದಿನಗಳ ಹಿಂದಷ್ಟೇ ಚಿತ್ರದ ಚಿತ್ರೀಕರಣ ಭರದಿಂದ ಸಾಗಿತ್ತು. ಇದೀಗ ನಿರ್ದೇಶಕರು ಚಿತ್ರದಿಂದ ಹೊರಬಂದಿದ್ದಾರೆ. ನಟ ಉಪೇಂದ್ರ ಮತ್ತು ನಿರ್ದೇಶಕ ನಡುವೆ ಸೃಜನಶೀಲ ವ್ಯತ್ಯಾಸಗಳಿಂದ ನಿರ್ದೇಶಕರು ನಿರ್ದೇಶನದಿಂದ ಹೊರ ಬಂದಿದ್ದಾರೆ.

ನಿರ್ದೇಶಕ ಬದಲಾದ ಬಗ್ಗೆ ಚಿತ್ರತಂಡ ಮಾತ್ರ ಇನ್ನು ಅಧಿಕೃತಗೊಳಸಿಲ್ಲ. ಮೂಲಗಳ ಪ್ರಕಾರ ಮೌರ್ಯ ಜಾಗಕ್ಕೆ ‘ಐ ಲವ್ ಯು’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಜಯರಾಮ್ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top