fbpx
ಸಮಾಚಾರ

‘ಬಿಗ್ ಬಾಸ್ ಸೀಸನ್-7’ ಪ್ರಾರಂಭದ ದಿನಾಂಕ ಬಹಿರಂಗ.

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಮತ್ತೊಂದು ಸೀಸನ್ನಿನ ಬಗ್ಗೆ ನಾನಾ ಗಾಸಿಪ್’ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.. ಬರೋಬ್ಬರಿ ಆರು ಸೀಸನ್ನುಗಳನ್ನು ಮುಗಿಸಿರುವ ಬಿಗ್ ಬಾಸ್ ಇದೀಗ ಏಳನೇ ಬಾರಿಗೆ ಕನ್ನಡ ಪ್ರೇಕ್ಷಕರ ಬಳಿಗೆ ಲಗ್ಗೆಯಿಡುತ್ತಿದೆ..

ಬಿಗ್ ಬಾಸ್ ಮತ್ತೆ ಯಾವಾಗ ಶುರುವಾಗುತ್ತೆ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಕಿಚ್ಚ ಉತ್ತರಿಸಿದ್ದಾರೆ. ಸುದೀಪ್ ಸದ್ಯ ಪೈಲ್ವಾನ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪೈಲ್ವಾನ್ ಸಿನಿಮಾದ ಬಗ್ಗೆ ಏನಾದರು ಪ್ರಶ್ನೆ ಕೇಳುವಂತೆ ಅಭಿಮಾನಿಗಳಿಗೆ ಹೇಳಿದ್ದರು. #ಆಸ್ಕ್ ಪೈಲ್ವಾನ್ ಹೆಸರಿನಲ್ಲಿ ಪೈಲ್ವಾನ್ ಸಿನಿಮಾದ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೆ ಹರಿಸಿದ್ದರು.

ಈ ಕಾರ್ಯಕ್ರಮ ಸಂಪೂರ್ಣವಾಗಿ ಪೈಲ್ವಾನ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೂ ಕೆಲವರು ಚೌಕಟ್ಟು ಮೀರಿ ಕೆಲವು ಪ್ರಶ್ನೆಗಳನ್ನು ಸುದೀಪ್‌ಗೆ ಕೇಳಿದ್ದಾರೆ. ಅವುಗಳಲ್ಲಿ ಬಿಗ್ ಬಾಸ್ ಹೊಸ ಸೀಸನ್ ಯಾವಾಗ ಆರಂಭವಾಗುತ್ತದೆ ಎಂಬುದೂ ಒಂದು ಪ್ರಶ್ನೆ.

ಈ ಪ್ರಶ್ನೆಗೆ ಉತ್ತರಿಸಿರುವ ಸುದೀಪ್, ಅಕ್ಟೋಬರ್ ಎರಡನೇ ವಾರದಲ್ಲಿ ಸಾರ್ ಎಂದಿದ್ದಾರೆ. ಸುದೀಪ್ ಸದಾ ಕ್ರಿಯಾಶೀಲವಾಗಿರುವ ನಟ. ಒಂದಾದ ಮೇಲೊಂದರಂತೆ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಪೈಲ್ವಾನ್ ಮುಗಿದಿದೆ. ಅಕ್ಟೋಬರ್ ಎರಡನೇ ವಾರದಿಂದ ಬಿಗ್ ಬಾಸ್‍ಗೆ ಅಣಿಯಾಗಲಿದ್ದಾರೆ ಸುದೀಪ್.

 

 

ಈ ಭಾರಿ ಕಲರ್ಸ್ ಕನ್ನಡಲ್ಲಿ:
ಕಳೆದ ಬಾರಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಿತ್ತು. ಅದಕ್ಕಿಂತ ಮೊದಲು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆ ಮೂಲಕ ಮತ್ತೆ ಆರಂಭದ ಎರಡು ಆವೃತ್ತಿಗಳಲ್ಲಿ ಪ್ರಸಾರವಾದ ಕಲರ್ಸ್ ವಾಹಿನಿಯಲ್ಲೇ ಮತ್ತೆ ಪ್ರಸಾರವಾಗುತ್ತಿದೆ.

ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಬಿಗ್ ಬಾಸ್ ಶೋನ ಏಳನೇ ಅವತರಣಿಕೆಗೆ ಈಗಾಗಲೇ ಸ್ಪರ್ಧಿಗಳನ್ನು ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ಸಂಭಂದಪಟ್ಟ ಕೆಲಸಗಳನ್ನೂ ಈಗಾಗಲೇ ಶುರುವಿಟ್ಟುಕೊಂಡಿದ್ದರಂತೆ..ಈ ಮೂಲಕ ಎಲ್ಲೋ ಒಂದಿಷ್ಟು ಮಂದಿ ಪ್ರತಿಭಾವಂತರು, ರಿಟೇರ್‍ಮೆಂಟ್ ಸ್ಟೇಜಿನ ಕಲಾವಿದರು ಮತ್ತು ಕೆಲವೊಂದಷ್ಟು ತಿಕ್ಕಲುತಾಣಗಳು, ಅಸಹ್ಯಕಾರಿ ಸಣ್ಣತನಗಳನ್ನು ಮತ್ತೊಮ್ಮೆ ನೋಡೋ ಕಾಲ ಬರುತ್ತಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top