fbpx
ಸಮಾಚಾರ

ಪುನೀತ್ ಮುಂದೆ ‘ಡಿ ಬಾಸ್, ಡಿ ಬಾಸ್’ ಕೂಗು: ಬೌನ್ಸರ್ ಮತ್ತು ವಿದ್ಯಾರ್ಥಿಗಳ ನಡುವೆ ಮಾರಾಮಾರಿ!

ಚಿತ್ರರಂಗದಲ್ಲಿ ಸ್ಟಾರ್‌ಗಳು ತಮ್ಮ ಪಾಡಿಗೆ ತಾವು ಅನ್ಯೋನ್ಯವಾಗಿದ್ದರೂ ಅಭಿಮಾನಿಗಳ ನಡುವೆ ಆಗಾಗ ತಿಕ್ಕಾಟ ಹೊತ್ತಿಕೊಳ್ಳುತ್ತಿರುತ್ತೆ. ಸದ್ಯ ಇಂಥಾದ್ದೇ ಒಂದು ಕೋಲ್ಡ್ ವಾರ್ ಮತ್ತೆ ಶುರುವಾಗಿದೆ. ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಂಥಾದ್ದೊಂದು ವಾರ್ ನಡೆಯಲು ಕಾರಣವಾಗಿರೋದು ‘ಯುವರತ್ನ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದ ಒಂದು ಘಟನೆ’.

ಹೌದು, ಪುನೀತ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಚಿತ್ರೀಕರಣ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ಪುನೀತ್ ಕಾಲೇಜ್ ಹುಡುಗನ ಪಾತ್ರ ಮಾಡುತ್ತಿದ್ದು, ಮೈಸೂರಿನ ಮಹಾರಾಜ ಕಾಲೇಜು ಒಳಾಂಗಣದಲ್ಲಿ ಶೂಟಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿದ್ದ ಕೇವಲ ಗುಂಪೊಂದು ‘ಡಿ ಬಾಸ್, ಡಿ ಬಾಸ್’ ಎಂಬ ಘೋಷಣೆ ಕೂಗಿದ್ದಾರೆ.

ಪುನೀತ್ ರಾಜಕುಮಾರ್ ಮುಂದೆ ‘ಡಿ ಬಾಸ್, ಡಿ ಬಾಸ್’ ಎಂದು ಘೋಷಣೆ ಕೂಗಿದ್ದರಂದ ಕೋಪಗೊಂಡ ಅಪ್ಪು ಬೌನ್ಸರ್ ಘೋಷಣೆ ಕೂಗಿದವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದ್ದು ಬೌನ್ಸರ್ ಗಳು ‘ಡಿ ಬಾಸ್’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಹೊಡೆದಿದ್ದಾರೆ. ನಂತರ ವಿದ್ಯಾರ್ಥಿಗಳು ಚಿತ್ರತಂಡ ಹಾಗೂ ವಿವಿ ಆಡಳಿತ ಮಂಡಳಿ ವಿರುದ್ಧ ಸ್ಥಳದಲ್ಲೇ ಪ್ರತಿಭಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top