fbpx
ಸಮಾಚಾರ

ಮಮ್ಮಿ ಆಗ್ತಿದ್ದಾರೆ ನಟಿ ಮೇಘನಾ ರಾಜ್!

ನಟಿ ಮೇಘನಾ ರಾಜ್ ಮಮ್ಮಿಯಾಗಿದ್ದಾರೆ. ನಟ ಚಿರಂಜೀವಿ ಸರ್ಜಾ ಜೊತೆ ಕಳೆದ ವರ್ಷ ಮಾಡುವೆ ಮಾಡಿಕೊಂಡಿದ್ದ ಮೇಘನಾ ಈಗ ತಾಯಿಯಾಗಿದ್ದಾರಾ ಎಂದು ಭಾವಿಸಬೇಡಿ. ಏಕೆಂದರೆ ಮೇಘನಾ ತಾಯಿಯಾಗಿದ್ದು ನಿಜ ಜೀವನದಲ್ಲಿಯಲ್ಲ ಬದಲಾಗಿ ಸಿನಿಮಾದಲ್ಲಿ.

ಇದೇ ಮೊದಲ ಬಾರಿಗೆ ನಟಿ ಮೇಘನಾ ರಾಜ್ ಮತ್ತು ನಟ ಸೃಜನ್ ಲೋಕೇಶ್ ಜೋಡಿಯಾಗಿ ನಟಿಸಿರುವ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಆದರೂ ಶೀರ್ಷಿಕೆ ಏನು ಎಂಬುದು ಬಹಿರಂಗ ಆಗಿರಲಿಲ್ಲ. ಕಥೆಗೆ ಸೂಕ್ತ ಆಗುವಂತಹ ಟೈಟಲ್​ಗಾಗಿ ತಿಂಗಳುಗಟ್ಟಲೆ ತಲೆ ಕೆಡಿಸಿಕೊಂಡಿತ್ತು ಚಿತ್ರತಂಡ. ಅಂತಿಮವಾಗಿ ಆಕರ್ಷಕ ಹೆಸರನ್ನು ಆಯ್ಕೆ ಮಾಡುವಲ್ಲಿ ನಿರ್ದೇಶಕ ಮಧುಚಂದ್ರ ಯಶಸ್ವಿಯಾಗಿದ್ದಾರೆ.

 

 

ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅಭಿನಯಿಸುತ್ತಿರುವ ಸಿನಿಮಾಗೆ “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಚಿತ್ರದಲ್ಲಿ ಸೆಲ್ಫಿ ಮಮ್ಮಿಯಾಗಿ ಮೇಘನಾ ಗೂಗಲ್ ಡ್ಯಾಡಿಯಾಗಿ ಸೃಜನ್ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಮೊಬೈಲ್ ವ್ಯಸನಕ್ಕೆ ಸಂಬಂಧಿಸಿದ ಸಿನಿಮಾವಾಗಿದೆ. ಸದ್ಯ ಟೈಟಲ್ ಮಾತ್ರ ರಿವೀಲ್ ಮಾಡಿರುವ ಮೇಘನಾ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಿದ್ದಾರಂತೆ. . ಟೈಟಲ್ ಮೂಲಕವೆ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿರುವ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಧ್ಯದಲ್ಲೇ ತೆರೆಗೆ ಬರಲಿದೆ. ಒಟ್ಟಿನಲ್ಲಿ ಮೇಘನಾ ರಾಜ್​ ಮಮ್ಮಿಯಾಗಿ ತೆರೆ ಮೇಲೆ ಬರ್ತಿರೋದಂತು ಸತ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top