fbpx
ಸಮಾಚಾರ

ಅಮೆರಿಕಕ್ಕೆ ಹೋಗಲು 81ರ ಅಜ್ಜನಂತೆ ವೇಷ ಧರಿಸಿಬಂದ 32ರ ವ್ಯಕ್ತಿ: ಕನ್ನಡಕದಿಂದ ಸಿಕ್ಕಿಬಿದ್ದ! ಬಂಧನದ ಕತೆಯೇ ತುಂಬಾ ಇಂಟರೆಸ್ಟಿಂಗ್​!

ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ 81 ವರ್ಷದ ಅಜ್ಜನ ರೀತಿ ವೇಷ ಧರಿಸಿ, ನಕಲಿ ಪಾಸ್‍ಪೋರ್ಟ್ ಇಟ್ಟುಕೊಂಡು ಬಂದಿದ್ದ 32 ವರ್ಷದ ವ್ಯಕ್ತಿಯೊಬ್ಬ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಸಿಬ್ಬಂದಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.

ಜಯೇಶ್​ ಪಟೇಲ್​ ವಂಚನೆ ಮಾಡಿದ ಯುವಕ. ಅಹಮದಬಾದ್​ನ ಈತ ತಲೆಗೆ ಬಿಳಿ ಬಣ್ಣ ಹಚ್ಚಿ ಮುದುಕನಂತೆ ವೇಷ ಧರಿಸಿ ನ್ಯೂಯರ್ಕ್​ನಿಂದ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾನೆ. ನ್ಯೂಯಾರ್ಕ್​ನಿಂದ ಯಾರಿಗೂ ಅನುಮಾನ ಬಾರದಂತೆ ಬಂದ ಈತನ ಅಸಲಿಯತ್ತ ದೆಹಲಿಯಲ್ಲಿ ಪತ್ತೆಯಾಗಿದೆ. ವೀಲ್​ಚ್ಹೇರ್​ನಲ್ಲಿ ಪ್ರಯಾಣಿಸುತ್ತಿದ್ದ ಈತನನ್ನು ಸೂಕ್ಷ್ಮವಾಗಿ ಗಮನಿಸಿದ ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಈತನ ಮುಖ ಚಹರೆಯಲ್ಲಿ ಅನುಮಾನ ಬಂದು ವಿಚಾರಿಸಿದ್ದಾರೆ.

ಕಳೆದ ಭಾನುವಾರ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀಲ್‌ಚೇರ್‌ನಲ್ಲಿ ಬಂದ ಜಯೇಶ್‌ ಪಟೇಲ್‌ ಪ್ರಾರಂಭಿಕ ತಪಾಸಣೆ ಹಾಗೂ ಇಮ್ಮಿಗ್ರೇಷನ್‌ ಕ್ಲಿಯರ್‌ ಮಾಡಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದ. ನಿಲ್ದಾಣದ ಭದ್ರತೆಗೆ ನಿಯೋಜನೆಗೊಂಡ ಸಿಐಎಸ್‌ಎಫ್‌ (ಕೇಂದ್ರೀಯ ಕೈಗಾರಿಕಾ ಭದ್ರತಾÜ ಪಡೆ) ಸಿಬ್ಬಂದಿ ಕೊನೆ ಹಂತದಲ್ಲಿ ಇವನ ಧ್ವನಿ ಇಳಿ ವಯಸ್ಸಿನವರಂತೆ ಇಲ್ಲ, ತಲೆಕೂದಲು ಬಿಳಿಯಾಗಿದ್ದರೂ ಚರ್ಮ ಸುಕ್ಕಾಗಿಲ್ಲ ಎಂಬುದನ್ನು ಗಮನಿಸಿ ತೀವ್ರತರದ ತಪಾಸಣೆಗೊಳಪಡಿಸಿದಾಗ ಅಸಲಿ ಕರಾಮತ್ತು ಬಯಲಿಗೆ ಬಂದಿದೆ.

ಪಾಸ್‍ಪೋರ್ಟ್‍ನಲ್ಲಿ ಆತನ ವಯಸ್ಸು 81 ಎಂದು ಉಲ್ಲೇಖಿಸಿದ್ದರೂ ಆತನ ಚರ್ಮವನ್ನು ನೋಡಿದಾಗ ಸಿಬ್ಬಂದಿಗೆ ಆತನಿಗೆ ಅಷ್ಟೆಲ್ಲಾ ವಯಸ್ಸಿನಂತೆ ಕಾಣಿಸಲಿಲ್ಲ. ಅಲ್ಲದೆ ಆತ ವಯಸ್ಸಾದಂತೆ ಕಾಣುವುದಕ್ಕೆ ಝೀರೋ ಪವರ್ ಕನ್ನಡಕವನ್ನು ಧರಿಸಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಆತನ ನಿಜರೂಪ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

ಜಯೇಶ್‌ ಪಟೇಲ್‌, ಅಮೆರಿಕಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವಂತೆ ಭರತ್‌ ಎಂಬ ಏಜೆಂಟ್‌ ಜತೆ 30 ಲಕ್ಷ ರೂ. ಡೀಲು ಕುದುರಿಸಿದ್ದ. ಏಜೆಂಟ್‌ ಭರತ್‌, ಜಯೇಶ್‌ನನ್ನು ದಿಲ್ಲಿಯ ಹೋಟೆಲ್‌ಗೆ ಕರೆದೊಯ್ದು ಮೇಕಪ್‌ ಆರ್ಟಿಸ್ಟ್‌ ಕರೆಸಿ 81 ವರ್ಷದ ಮುದುಕನ ರೀತಿ ಮೇಕಪ್‌ ಮಾಡಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಭರತ್‌ ಹಾಗೂ ಮೇಕಪ್‌ ಕಲಾವಿದನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top