fbpx
ಸಮಾಚಾರ

“ಪಿ.ವಿ ಸಿಂಧು ಜೊತೆ ಮದುವೆ ಮಾಡಿಸಿ, ಇಲ್ಲ ಅಪಹರಿಸುತ್ತೇನೆ” ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ 70 ವರ್ಷದ ವೃದ್ಧ!

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡು ಹೊಸ ಇತಿಹಾಸ ನಿರ್ಮಿಸಿರುವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಜೊತೆ ವಿವಾಹ ಮಾಡಿಸಿಕೊಡಿ ಎಂದು70 ವರ್ಷದ ವ್ಯಕ್ತಿಯೊಬ್ಬ ನೇರವಾಗಿ ಜಿಲ್ಲಾ ಕಲೆಕ್ಟರ್ ಗೆ ವಿಚಿತ್ರ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ.

ತಮಿಳುನಾಡಿನ ರಾಮನಾಥಪುರಂನ 70 ವರ್ಷದ ವೃದ್ಧ ಮಲೈಸ್ವಾಮಿ ಬಾಡ್ಮಿಂಟನ್​ ತಾರೆಯನ್ನು ಮದುವೆಯಾಗಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈ ಕುರಿತು ಜಿಲ್ಲಾಧಿಕಾರಿಗಳಿಗೂ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. 24 ವರ್ಷ ಪಿವಿ ಸಿಂಧು ಅವರನ್ನು ಮದುವೆಯಾಗಬೇಕು ಎಂಬ ಇಚ್ಛೆಯನ್ನು ನಾನು ಹೊಂದಿದ್ದು, ಇದಕ್ಕಾಗಿ ಬೇಕಾದ ಅಗತ್ಯ ಸಿದ್ಧತೆಗಳನ್ನು ನಡೆಸಬೇಕು. ಒಂದು ವೇಳೆ ಜಿಲ್ಲಾಡಳಿತ ಈ ಸಿದ್ಧತೆಗೆ ಮುಂದಾಗದಿದ್ದರೆ, ನಾನು ಸಿಂಧು ಅವರನ್ನು ಅಪಹರಿಸಿ, ಮದುವೆಯಾಗುತ್ತೇನೆ ಎಂದು ಅರ್ಜಿಯಲ್ಲಿ ವೃದ್ಧ ಎಚ್ಚರಿಕೆ ನೀಡಿದ್ದಾರೆ.

ರಾಮನಾಥಪುರಂನಲ್ಲಿ ನಡೆದ ಜಿಲ್ಲಾಧಿಕಾರಿಯೊಂದಿಗೆ ಸಾರ್ವಜನಿಕರ ವಾರದ ಸಭೆಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಗ್ರಾಮಸ್ಥರ ಸಮಸ್ಯೆ ಕುರಿತು ದೂರು ಆಲಿಕೆ ಸಭೆಯಲ್ಲಿ ಕೈಯಲ್ಲಿ ಅರ್ಜಿ ಹಿಡಿದು ಬಂದ ವೃದ್ಧ ಪಿವಿ ಸಿಂಧು ಅವರ ಫೋಟೋ ಲಗತ್ತಿಸಿ, ಅವರನ್ನು ಮದುವೆಯಾಗಬೇಕು ಎಂದು ಕೇಳಿಕೊಂಡಿದ್ದಾರೆ.

ನನಗೆ 70 ವರ್ಷ ಆಗಿಲ್ಲ ನನಗೆ ಈಗ 16 ವರ್ಷ. ನಾನು ಹುಟ್ಟಿದ್ದು ಏಪ್ರಿಲ್​ 4, 2004ರಂದು ಎಂದು ವೃದ್ಧ ಹೇಳಿದ್ದು ಪಿವಿ ಸಿಂಧು ನನ್ನ ಜೀವನ ಸಂಗಾತಿಯಾಗಬೇಕು ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top