fbpx
ಸಮಾಚಾರ

22 ವಯಸ್ಸಲ್ಲೇ ಹವಾಲಾ ದಂಧೆಯಲ್ಲಿ ಡಿಕೆಶಿ ಪುತ್ರಿ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸಿಂಗಾಪುರ್ ಪ್ರಜೆ!

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾಗೂ ಹವಾಲಾ ಹಣ ಕಂಟಕ ಎದುರಾಗಿದೆ. 2017ರಲ್ಲಿ ಬ್ಯುಸಿನೆಸ್ ಡೀಲ್ ಹೆಸರಿನಲ್ಲಿ ಐಶ್ವರ್ಯಾ ಸಿಂಗಾಪುರ್ ಟೂರ್ ಹೋಗಿರುವುದು ಈಗ ಬೆಳಕಿಗೆ ಬಂದಿದೆ. ಕೋಟಿ-ಕೋಟಿ ರೂ. ಅಕ್ರಮ ಹಣ ವಹಿವಾಟಿಗೆಯೇ ಡಿಕೆಶಿವಕುಮಾರ್ ಅವರು ಮಗಳನ್ನು ಸಿಂಗಾಪುರಕ್ಕೆ ಕಳುಹಿಸಿದ್ದರು ಎಂದು ಹೇಳಲಾಗುತ್ತಿದೆ. ಕ್ರಾಸ್ ಬಾರ್ಡರ್ ಹವಾಲಾ ದಂಧೆಯಲ್ಲಿ ಪಳಗಿದ್ದ ಸಿಂಗಾಪುರ ಈ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ!

2 ವರ್ಷಗಳ ಹಿಂದೆ ಐಟಿ ದಾಳಿ ನಡೆಯುವ 1 ವಾರಕ್ಕೂ ಮೊದಲು ಸಿಂಗಾಪುರ ನಾಗರಿಕ, ಹವಾಲಾ ಏಜೆಂಟ್ ರಜನೀಶ್ ಗೋಪಿನಾಥ್ ಜತೆ ಡಿಕೆಶಿ ಪುತ್ರಿ ಐಶ್ವರ್ಯಾ ಸಿಂಗಾಪುರಕ್ಕೆ ತೆರಳಿದ್ದರು. ಶಿವಕುಮಾರ್ ಸೂಚನೆ ಮೇರೆಗೆ ಕೆಫೆ ಕಾಫಿ ಡೇ ಉದ್ಯೋಗಿ ದೀಕ್ಷಿತ್​ಗೆ (ಉದ್ಯಮಿ ಸಿದ್ಧಾರ್ಥ್ ಆಪ್ತ) ಕೋರ್ಡ್ ವರ್ಡ್​ನಂತೆ 20 ರೂ. ನೋಟು ಕೊಟ್ಟು 20 ಕೋಟಿ ರೂ. ಸ್ವೀಕರಿಸಿದ್ದರು. ಆ ಹಣವನ್ನು ಡಿಕೆಶಿ ಸೂಚನೆ ಮೇರೆಗೆ ಮತ್ತೊಂದು ಉದ್ಯಮದಲ್ಲಿ ಐಶ್ವರ್ಯಾ ತೊಡಗಿಸಿ ಭಾರತಕ್ಕೆ ವಾಪಸ್ ಮರಳಿದ್ದರು. ಇದಕ್ಕೆ ರಜನೀಶ್ ಗೋಪಿನಾಥ್ ಮಧ್ಯಸ್ಥಿಕೆ ವಹಿಸಿದ್ದ ಎಂಬ ವಿಚಾರ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಇಡಿ ಉನ್ನತ ಮೂಲಗಳು ತಿಳಿಸಿವೆ.

ಗೋಪಿನಾಥನ್‌ ಮೊಬೈಲ್‌ ಪರಿಶೀಲಿಸಿದಾಗ ಶಿವಕುಮಾರ್‌ ಜೊತೆ ಮೆಸೇಜ್‌ ವಿನಿಮಯಗಳು ಪತ್ತೆಯಾಗಿವೆ. ಅಲ್ಲದೆ, ಮಾಜಿ ಸಚಿವರ ಆಪ್ತ ಚಂದ್ರಶೇಖರ್‌ ಜತೆ ಗೋಪಿನಾಥನ್‌ ನಿರಂತರ ಸಂಪರ್ಕದಲ್ಲಿದ್ದುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಐಶ್ವರ್ಯ ಸಿಂಗಾಪುರಕ್ಕೆ ಬರುತ್ತಾರೆ. ಅವರೊಂದಿಗೆ ತೆರಳಿ ನಾನು ಹೇಳಿದ ವ್ಯಕ್ತಿಯಿಂದ ಹಣ ಪಡೆದುಕೊಳ್ಳಿ’ ಎಂದು ಚಂದ್ರಶೇಖರ್‌ ನನಗೆ ಸೂಚಿಸಿದ್ದರು. ಈ ಹಣ ಪಡೆಯಲು ಭಾರತದ .20 ನೋಟು ತೋರಿಸುವಂತೆ ನಿರ್ದೇಶಿಸಲಾಗಿತ್ತು. ಶಿವಕುಮಾರ್‌ ಅವರು ಚಂದ್ರಶೇಖರ್‌ ಮೂಲಕ ಸೂಚನೆಗಳನ್ನು ಕೊಡುತ್ತಿದ್ದರು. ಹಣ ಸ್ವೀಕರಿಸಿದ ಬಳಿಕ ಶಿವಕುಮಾರ್‌ ಅವರಿಗೆ ಮೆಸೇಜ್‌ ಮಾಡಿ ಖಚಿತಪಡಿಸಿದ್ದೆ ಎಂದು ಗೋಪಿನಾಥನ್‌ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top