fbpx
ಸಮಾಚಾರ

ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡೋಣ ಬಾ ಎಂದ ನಿರ್ದೇಶಕ: ನಟಿ ಕೊಟ್ಟ ಉತ್ತರಕ್ಕೆ ತಬ್ಬಿಬ್ಬಾದ ನಿರ್ದೇಶಕ

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ..

ಇದೀಗ ನಿರ್ದೇಶಕರೊಬ್ಬರು ನನಗೆ ಕಿಸ್ಸಿಂಗ್ ಸೀನ್ ರಿಹರ್ಸಲ್ ಮಾಡಬೇಕು ರೂಂಗೆ ಬಾ ಅಂದಿದ್ದರು ಎಂದು ಬಾಲಿವುಡ್ ನಟಿ ಜರೀನ್ ಖಾನ್ ಹಿಂದಿನ ಕಹಿ ಘಟನೆಯೊಂದನ್ನು ಹೇಳಿಕೊಂಡಿದ್ದಾರೆ. 32 ವರ್ಷದ ಜರೀನ್ ಖಾನ್ ಸಂದರ್ಶನವೊಂದರಲ್ಲಿ ತಮಗೆ ಎದುರಾಗಿದ್ದ ಕರಾಳ ಘಟನೆಯೊಂದನ್ನು ವಿವರಿಸಿದ್ದಾರೆ.

ಒಮ್ಮೆ ನಿರ್ದೇಶಕನೊಬ್ಬ ತನ್ನೊಂದಿಗೆ ಕಿಸ್ಸಿಂಗ್​ ದೃಶ್ಯದ ರಿಹರ್ಸಲ್​ ಮಾಡುವಂತೆ ಕೇಳಿದ. ಆ ವ್ಯಕ್ತಿಯೇ ಹಾಗಿದ್ದ, ಹಿಂಜರಿಕೆಯನ್ನು ಬಿಡಬೇಕೆಂದಿದ್ದ. ಆ ಸಂದರ್ಭದಲ್ಲಿ ನಾನು ಹೊಸಬಳಾಗಿದ್ದೆ ಎಂದು ಜರೀನ್​ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು ನಿರ್ದೇಶಕ ಕೇಳಿದ್ದಕ್ಕೆ, ನಾನು ರಿಹರ್ಸಲ್​ಗಾಗಿ ಯಾವುದೇ ಕಿಸ್ಸಿಂಗ್​ ದೃಶ್ಯ ಮಾಡುವುದಿಲ್ಲ, ಕಿಸ್ಸಿಂಗ್ ಸೀನ್ ಬಿಟ್ಟು ಬೇರೆ ಯಾವುದೇ ದೃಶ್ಯವಾದರೂ ಸರಿ ರಿಹರ್ಸಲ್ ಮಾಡೋಣ” ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

ಅಲ್ಲದೆ ಮತ್ತೊಂದು ಘಟನೆಯನ್ನು ಹಂಚಿಕೊಂಡಿದ್ದಾರೆ. “ಸ್ನೇಹಿತೆಗಿಂತ ಹೆಚ್ಚಿನ ಸಂಬಂಧ ನನ್ನ ಜೊತೆ ಹೊಂದಿರಬೇಕು” ಎಂದು ಕೇಳಿದ್ದರಂತೆ. ಆದ್ರೆ ಜರೀನ್ ಖಾನ್ ಯಾವುದಕ್ಕು ಒಪ್ಪಿಗೆ ನೀಡಿಲ್ಲವಂತೆ. ಇಂದು ಜರೀನ್ ಬಾಲಿವುಡ್ ನ ಖ್ಯಾತ ನಟಿಯಾಗಿ ಬೆಳೆದುನಿಂತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top