fbpx
ಸಮಾಚಾರ

ಪ್ರಧಾನಿ ಮೋದಿ ಪತ್ನಿಯನ್ನು ಭೇಟಿಯಾಗಿ ವಿಶೇಷ ಗಿಫ್ಟ್ ನೀಡಿದ ಮಮತಾ ಬ್ಯಾನರ್ಜಿ!

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ದೆಹಲಿಗೆ ತೆರಳುವುದಕ್ಕೂ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮೋದಿಯವರ ಪತ್ನಿ ಜಶೋದಾಬೆನ್ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ನೆರೆಯ ಜಾರ್ಖಂಡ್‌ನ ಧನ್‌ಬಾದ್‌ ಭೇಟಿಗೆ ತೆರಳಿದ್ದ ಮೋದಿ ಪತ್ನಿ ಜಶೋದಾಬೆನ್ ಎರಡು ದಿನಗಳ ಬಳಿಕ ಅಲ್ಲಿಂದ ತೆರಳುತ್ತಿದ್ದರು. ಈ ವೇಳೆ ಕೋಲ್ಕತಗೆ ಬಂದಿಳಿದಿದ್ದ ಅವರನ್ನು ದೆಹಲಿಗೆ ಹೊರಟಿದ್ದ ಮಮತಾ ಬ್ಯಾನರ್ಜಿ ಭೇಟಿ ಮಾಡಿದ್ದಾರೆ. ಪರಸ್ಪರ ಭೇಟಿಯಾದ ಇಬ್ಬರು ಉಭಯ ಕುಶಲೋಪರಿಯನ್ನು ವಿಚಾರಿಸಿಕೊಂಡರು. ಈ ವೇಳೆ ಮುಖ್ಯಮಂತ್ರಿ ಮಮತಾ, ಜಶೋದಾಬೆನ್‌ ಅವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಆಕಸ್ಮಿಕ ಭೇಟಿ:
ನಿವೃತ್ತ ಶಿಕ್ಷಕಿಯಾಗಿರುವ ಜಶೋದಾಬೆನ್ ಎರಡು ದಿನಗಳ ಪಶ್ಚಿಮ ಬಂಗಾಳ ಭೇಟಿ ಮುಗಿಸಿದ್ದ ಜಶೋದಾಬೇನ್ ದೆಹಲಿಗೆ ಮರಳಲು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಬುಧವಾರದಂದು ಪಿಎಂ ಮೋದಿ ಜೊತೆಗೆ ನಿಗಧಿಯಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ದೀದಿ ಕೂಡಾ ದೆಹಲಿಗೆ ಹೊರಟಿದ್ದರು. ಈ ವೇಳೆ ಆಕಸ್ಮಿಕವಾಗಿ ಜಶೋದಾಬೇನ್ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಭೇಟಿಯಾಗಿದ್ದಾರೆ. ನಗು ಮೊಗದಿಂದಲೇ ಜಶೋದಾಬೇನ್ ಜೊತೆ ಮಾತನಾಡಿದ ದೀದಿ, ಸೀರೆಯೊಂದನ್ನೂ ಕೊಡುಗೆಯಾಗಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top