fbpx
ಸಮಾಚಾರ

ಕೆಜಿಎಫ್-2 ನಂತರ ದಕ್ಷಿಣ ಭಾರತದ ಸ್ಟಾರ್ ಡೈರಕ್ಟರ್ ಚಿತ್ರದಲ್ಲಿ ಯಶ್ ಬಾಸ್ ನಟನೆ!

ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಕೆಜಿಎಫ್ ಚಾಪ್ಟರ್-2 ಚಿತ್ರದ ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿದ್ದು ಈ ಮದ್ಯೆ ಕೆಜಿಎಫ್-2 ನಂತರ ಯಶ್ ಹೊಸ ಚಿತ್ರದ ಬಗ್ಗೆ ಹೊರ ಸುದ್ದಿಗಳು ಹರಿದಾಡತೊಡಗಿವೆ.. ಕೆಜಿಎಫ್ -2 ನಂತರ ರಾಕಿ ಭಾಯ್ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.

 

 

ಪೂರಿ ಜಗನ್ನಾಥ್ ಅವರು ನಟ ವಿಜಯ್ ದೇವರಕೊಂಡ ಜೊತೆ ಹೊಸ ಸಿನಿಮಾ ಘೋಷಿಸಿದ ಮಾಡಿದ ನಂತರ ಯಶ್ ಅವರ ‘ಜನ ಗಣ ಮನ’ ಸಿನಿಮಾದಿಂದ ಯಶ್ ಹೊರಬಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸದ್ಯ ವಿಜಯ್ ದೇವರಕೊಂಡಗೆ ನಿರ್ದೇಶಿಸುತ್ತಿರುವುದು ಫೈಟರ್ ಎನ್ನುವ ಬೇರೆ ಕಥೆಯಂತೆ. ‘ಜನ ಗಣ ಮನ’ ಚಿತ್ರ ಯಶ್ ಗಾಗಿಯೆ ಇಟ್ಟಿದ್ದಾರಂತೆ ಪೂರಿ ಜಗನ್ನಾಥ್.

ಯಶ್ ಅಭಿನಯದ ಈ ಸಿನಿಮಾವನ್ನು ಪುರಿ ಜಗನ್ನಾಥ್ ಬೃಹತ್ ವೆಚ್ಚದ ಬಜೆಟ್ ನಲ್ಲಿ ತಯಾರಿಸಲಿದ್ದಾರೆ.ಪ್ಯಾನ್ ಇಂಡಿಯಾ ಆ್ಯಕ್ಷನ್ ಪ್ಲಿಕ್ ಸಿನಿಮಾ ನಿರ್ಮಾಣ ಮಾಡಲಿದೆ. ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ತಯಾರಾಗಲಿದೆ, ಏಕಕಾಲದಲ್ಲಿ ಹಿಂದಿ ಮತ್ತು ತಮಿಳು ಭಾಷೆಗೂ ಡಬ್ ಆಗಲಿದೆ. ಈ ಸಿನಿಮಾದಲ್ಲಿ ದೇಶಭಕ್ತಿ ಕಥೆಯನ್ನು ಪುರಿ ತರುತ್ತಿದ್ದಾರಂತೆ, ಕೆಜಿಎಪ್-2 ಸಿನಿಮಾ ಶೂಟಿಂಗ್ ಪೂರ್ಣಗೊಂಡ ನಂತರ ಪುರಿ ಸಿನಿಮಾ ಆರಂಭವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top