fbpx
ಸಮಾಚಾರ

ದರ್ಶನ್ ಟೀಂನಿಂದ ಮ್ಯಾನೇಜರ್​ ಶ್ರೀನಿವಾಸ್ ಕಿಕ್​ ಔಟ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತವಲಯದಿಂದ ಮತ್ತೊಬ್ಬ ಮ್ಯಾನೇಜರ್ ಔಟ್ ಆಗಿದ್ದಾರೆ. ದಚ್ಚು ಬಳಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ (ಸೀನ) ರವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಚಟುವಟಿಕೆಗಳಿಂದ ಗೇಟ್ ಪಾಸ್ ನೀಡಲಾಗಿದೆ.

 

 

ಈ ಕುರಿತು ಇವತ್ತು ದರ್ಶನ್‍ರ ಅಫಿಶಿಯಲ್ ಫ್ಯಾನ್ಸ್ ಪೇಜ್ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್‍ನಲ್ಲಿ ಪೋಸ್ಟ್ ಮಾಡಲಾಗಿದೆ. ಮ್ಯಾನೇಜರ್​ ಶ್ರೀನಿವಾಸ್ ಅವರ ಫೋಟೋ ಜೊತೆಗೆ ಒಂದು ಪೋಸ್ಟ್​ ಮಾಡಲಾಗಿದೆ. ‘ನಮ್ಮ ಡಿಬಾಸ್ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ್‍ರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ. ಅವರ ಜೊತೆ ಡಿಬಾಸ್‍ರವರ ಹೆಸರಿನಲ್ಲಿ ಯಾವುದೇ ವ್ಯವಹಾರ ಮಾಡದಿರಿ’ ಎಂದು ದರ್ಶನ್​ ಅವರ ಅಭಿಮಾನಿಗಳ ಟ್ವಿಟರ್​ ಪುಟದಲ್ಲಿ ಶೇರ್​ ಮಾಡಲಾಗಿದೆ.

 

 

ಹೀಗೆ ಇದ್ದಕ್ಕಿದ್ದಂತೆ ಶ್ರೀನಿವಾಸ್ ಅವರನ್ನು ಕಿಟ್ ಔಟ್ ಮಾಡಲು ಅಧಿಕೃತ ಕಾರಣ ತಿಳಿದು ಬಂದಿಲ್ಲ. ವೈಯಕ್ತಿಕ ಕಾರಣಗಳಿಂದ ದೂರ ಸರಿಸಲಾಗಿದೆ ಎಂದು ಹೇಳಲಾಗಿದೆ. ಇವರಿಗೂ ಮೊದಲು ಮಲ್ಲಿಕಾರ್ಜುನ್ ಎಂಬುವವರು ಮ್ಯಾನೆಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಮೇಲೆ ಮೋಸದ ಆರೋಪ ಕೇಳಿ ಬಂದಿತ್ತು. ಅವರನ್ನು ಹೊರಗೆ ಕಳುಹಿಸಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top