fbpx
ಸಮಾಚಾರ

ರಾಧಾಕಲ್ಯಾಣ ಸೀರಿಯಲ್ ನಟಿಗೆ ಕೂಡಿಬಂತು ಕಂಕಣ ಭಾಗ್ಯ!

‘ರಾಧಾ ಕಲ್ಯಾಣ’, ‘ಹುಬ್ಬಳ್ಳಿ ಹುಡ್ಗ, ಮಂಗಳೂರು ಹುಡ್ಗಿ’ ಧಾರಾವಾಹಿಗಳ ಖ್ಯಾತಿಯ ಕಿರುತೆರೆ ನಟಿ ರಾಧಿಕಾ ರಾವ್ ಅವರು ತಮ್ಮ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೂಲತಃ ಮಂಗಳೂರಿನವರಾಗಿರುವ ರಾಧಿಕಾ ಹಾಗೂ ಆಕರ್ಷ್ ಭಟ್, ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರ ಅಂದರೆ ಅಕ್ಟೋಬರ್ 13 ರಂದು ನಡೆದಿದೆ. ರಾಧಿಕಾ ರಾವ್ ನಿಶ್ಚಿತಾರ್ಥ ಮಾಡಿಕೊಂಡಿರುವ ಆಕರ್ಷ್ ಭಟ್ ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್ ಮತ್ತು ಮೈಂಡ್ ರೀಡರ್. ಇವರು ಮೂಲತಃ ಮಂಗಳೂರಿನವರೇ. ಆಕರ್ಷ್ ಕೂಡ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕಳೆದ ಮಾರ್ಚ್ ನಲ್ಲಿ ರಾಧಿಕಾಗೆ ಅವರ ಗೆಳತಿಯ ಮೂಲಕ ಆಕರ್ಷ್ ಪರಿಚಯ ಆಗಿದೆ. ಪರಿಚಯ ಸ್ನೇಹವಾಗಿ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಸ್ನೇಹ ಪ್ರೀತಿಯಾಗಿ ಆಕರ್ಷ್, ರಾಧಾ ಅವರಿಗೆ ಪ್ರಪೋಸ್ ಮಾಡಿದ್ದಾರೆ. ರಾಧಿಕಾ ಕೂಡ ಸಂತಸದಿಂದಲೇ ಆಕರ್ಷ್ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ನಂತರ ಇಬ್ಬರೂ ತಮ್ಮ ತಮ್ಮ ಮನೆಯಲ್ಲಿ ಪ್ರೀತಿಯ ವಿಚಾರವನ್ನು ತಿಳಿಸಿದ್ದಾರೆ. ಬಳಿಕ ಎರಡೂ ಕುಟುಂಬದವರು ಒಪ್ಪಿ ಎಂಗೇಜ್‍ಮೆಂಟ್ ಮಾಡಿದ್ದಾರೆ.

ರಾಧಿಕಾ ತನ್ನ ನಿಶ್ಚಿತಾರ್ಥದ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, “ಇವನು ನನ್ನ ಹೃದಯವನ್ನು ಕದ್ದನು. ಹಾಗಾಗಿ ನಾನು ಅವನ ಕೊನೆಯ ಹೆಸರನ್ನು ಕದಿಯಲು ಹೋಗುತ್ತಿದ್ದೇನೆ. ಈ ನಿಶ್ಚಿತಾರ್ಥದಿಂದ ನಾವಿಬ್ಬರು ಜೀವನದಾದ್ಯಂತ ಒಟ್ಟಾಗಿ ಇರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ತಮ್ಮ ಎಂಗೇಜ್‌ಮೆಂಟ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಧಿಕಾಗೆ ಶುಭಾಶಯಗಳ ಸುರಿಮಳೆಯೇ ಬಂದಿದೆ. ಮುಂದಿನ ಮಾರ್ಚ್‌ನಲ್ಲಿ ರಾಧಾ ಕಲ್ಯಾಣ ಅಂದರೆ ರಾಧಿಕಾ ಕಲ್ಯಾಣ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top