fbpx
ಸಮಾಚಾರ

ಸೀಮಂತ ಪಾರ್ಟಿಯಲ್ಲಿ ಹಳದಿ ಗೌನ್ ತೊಟ್ಟು ಮಿಂಚಿದ ರಾಧಿಕಾ ಪಂಡಿತ್ ಇಲ್ಲಿವೆ ಕಲರ್ ಫುಲ್ ಫೋಟೋಗಳು

ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗಳು ಐರಾಗೆ ಈಗ 10 ತಿಂಗಳಾಗಿದ್ದು, ಶೀಘ್ರದಲ್ಲೇ ರಾಧಿಕಾ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಮದ್ಯೆ ರಾಧಿಕಾ ಅವರು ಸೀಮಂತ ಮಾಡಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ್ದಾರೆ.

 

 

 

 

 

View this post on Instagram

 

A sneak peek into the wonderful Baby shower my dear friends gave me!! More pics and details coming soon 🤗 #radhikapandit #nimmaRP

A post shared by Radhika Pandit (@iamradhikapandit) on

 

ರಾಧಿಕಾ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋಗೆ “ನನ್ನ ಆತ್ಮೀಯ ಸ್ನೇಹಿತರು ನನಗೆ ನೀಡಿದ ಅದ್ಭುತ ಸೀಮಂತ ಕಾರ್ಯಕ್ರಮದ ಒಂದು ಇಣುಕು ನೋಟ. ಹೆಚ್ಚಿನ ಫೋಟೋಗಳು ಹಾಗೂ ವಿವರಗಳು ಶೀಘ್ರದಲ್ಲೇ ಬರಲಿದೆ” ಎಂದು ಕಾಪ್ಷನ್ ಬರೆದು ಪೋಸ್ಟ್ ಮಾಡಿದ್ದಾರೆ.

 

 

ಪೋಸ್ಟ್ ಮಾಡಿರುವ ಫೋಟೋದಲ್ಲಿ ರಾಧಿಕಾ ಅವರು ಹಳದಿ ಬಣ್ಣದ ಗೌನ್ ಧರಿಸಿ ಕೈಯಲ್ಲಿ ಬಿಳಿ ಬಣ್ಣದ ಗುಲಾಬಿ ಹೂ ಹಿಡಿದು ಪೋಸ್ ನೀಡಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ನಟಿಗೆ ಹಾರೈಸುತ್ತಿದ್ದು ಬ್ಯೂಟಿಫುಲ್ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top