fbpx
ಸಮಾಚಾರ

ತಮಿಳಿನ ಸ್ಟಾರ್ ಸಿನಿಮಾಗೆ ಹೀರೋಯಿನ್ ಆದ ಕೆಜಿಎಫ್ ಚೆಲುವೆ?

‘ಕೆಜಿಎಫ್’ ಚಿತ್ರದ ಮೂಲಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಖ್ಯಾತಿ ಶ್ರೀನಿಧಿ ಶೆಟ್ಟಿ ಮೊದಲ ಯತ್ನದಲ್ಲೇ ದೇಶಾದ್ಯಂತ ಫೇಮಸ್‌ ಆದವರು. ‘ಕೆಜಿಎಫ್ 2’ ಚಿತ್ರದ ಚಿತ್ರೀಕರಣದಿಂದಾಗಿ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ಈಗ ಅವರ ಕಡೆಯಿಂದ ಅಚ್ಚರಿ ಸುದ್ದಿಯೊಂದು ಹೊರಬಿದ್ದಿದೆ.

 

 

ಶ್ರೀನಿಧಿ ಶೆಟ್ಟಿ ಇದೀಗ ತಮಿಳಿನಲ್ಲಿ ವಿಕ್ರಮ್ 58 ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಶ್ರೀನಿಧಿ ಶೆಟ್ಟಿ ಇನ್ನೂ ಚಿತ್ರಕ್ಕೆ ಸಹಿ ಹಾಕದಿದ್ದರೂ ಕೂಡ ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಜಿಎಫ್ 2 ಮತ್ತು ವಿಕ್ರಮ್ 58 ನಲ್ಲಿ ಏಕಕಾಲದಲ್ಲಿ ಅಭಿನಯಿಸಲಿದ್ದಾರೆ. ಶ್ರೀನಿಧಿ ಸದ್ಯ ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಮ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ರೆ ಕೆಜಿಎಫ್-2 ಜೊತೆಗೆ ವಿಕ್ರಮ್ ಸಿನಿಮಾದಲ್ಲೂ ಭಾಗಿಯಾಗಲಿದ್ದಾರೆ.
ಈ ಹಿಂದೆ ಚಿತ್ರದ ನಾಯಕಿ ಪಾತ್ರವನ್ನು ಪ್ರಿಯಾ ಭವನಾ ಶಂಕರ್ ಮಾಡಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿತ್ತು.

ಇನ್ನು, ಈ ಸಿನಿಮಾಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದು, ವಿಕ್ರಮ್‌ ಈ ಚಿತ್ರಕ್ಕಾಗಿ ಬರೋಬ್ಬರಿ 23 ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರಕ್ಕೆ ಸದ್ಯ ‘ವಿಕ್ರಮ್ 58’ ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ಅಜಯ್ ಜ್ಞಾನಮುತ್ತು ಆಕ್ಷನ್ ಕಟ್ ಹೇಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top