fbpx
ಸಮಾಚಾರ

ಬಿಗ್ ಬಾಸ್ ಮನೆಯಲ್ಲಿ ರವಿ ಬೆಳಗೆರೆ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಬಿಗ್​ ಬಾಸ್​ನ 7ನೇ ಆವೃತ್ತಿಯಲ್ಲಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಸ್ಪರ್ಧಿಯಾಗಿ ದೊಡ್ಡಮನೆ ಪ್ರವೇಶಿಸಿದ್ದರು. ಆದರೆ, ಮೊದಲ ದಿನವೇ ಅನಾರೋಗ್ಯ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಗ ಅವರು ತಮ್ಮ ಪುತ್ರಿ ಭಾವನಾ ಬೆಳಗೆರೆ ಅವರನ್ನು ಭೇಟಿಯಾಗಿದ್ದರು. ಇದೀಗ ಚೇತರಿಸಿಕೊಂಡಿರುವ ರವಿ ಬೆಳಗೆರೆ ಬಿಗ್​ ಬಾಸ್​ ಮನೆಗೆ ಮರಳಿದ್ದಾರೆ. ಬಿಗ್​ ಬಾಸ್​ನ ನಿಯಮದ ಪ್ರಕಾರ ಈಗ ಅವರು ಸ್ಪರ್ಧಿಯಾಗಿರುವುದಿಲ್ಲ. ಕೇವಲ ಅತಿಥಿಯಾಗಿರುತ್ತಾರೆ.

 

 

 

ರವಿ ಬೆಳಗರೆ ಆರೋಗ್ಯದ ಪರಿಶೀಲನೆ ಮಾಡಲಾಗಿದ್ದು ಟಾಸ್ಕ್ ಗಳಲ್ಲಿ ಅವರು ಭಾಗವಹಿಸಲು ಸಾಧ್ಯವಿಲ್ಲ ಹಾಗಾಗಿ ರವಿ ಬೆಳಗೆರೆ ಈ ಶನಿವಾರದವರೆಗೆ ಮನೆಯಲ್ಲಿ ಅತಿಥಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಲ್ಲಿಗೆ ರವಿ ಬೆಳಗೆರೆ ಅವರ ವೋಟಿಂಗ್ ಸಹ ಬಂದ್ ಆಗಲಿದೆ.

ಅಲ್ಲಿಗೆ ಸ್ಪರ್ಧಿಯಾಗಿ ಮನೆ ಒಳ ಪ್ರವೇಶ ಮಾಡಿದ್ದ ರವಿ ಬೆಳಗೆರೆ ಅತಿಥಿಯಾಗಿ ಬದಲಾಗಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ 7 ಗೆ ಅದ್ದೂರಿ ಚಾಲನೆ ಸಿಕ್ಕಿದ್ದು ರವಿ ಬೆಳಗೆರೆ ಸೇರಿ 18 ಜನ ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ್ದರು. ಇದೀಗ ಬೆಳಗೆರೆ ಒಂದು ವಾರದ ಮಟ್ಟಿಗೆ ಮನೆಯಲ್ಲಿ ಮುಂದುವರಿಯುತ್ತಾರೆ. ಮೊದಲನೆ ದಿನವೇ ಮಧ್ಯರಾತ್ರಿ ಆ್ಯಂಬುಲೆನ್ಸ್ ಕರೆಸಿ ಮನೆಯಿಂದ ಹೊರಹೋಗಿದ್ದ ಬೆಳಗೆರೆ ಮಧ್ಯಾಹ್ನ ಮತ್ತೆ ಮನೆಗೆ ವಾಪಸಾದರು. ಈ ವೇಳೆ ಮನೆಯವರು ಬೆಳೆಗೆರೆಯವರನ್ನು ಮತ್ತಷ್ಟು ಆತ್ಮೀಯತೆಯಿಂದ ಬರಮಾಡಿಕೊಂಡರು.

‘ಡಾಕ್ಟರ್ ಸಲಹೆಯ ಮೇರೆಗೆ ರವಿ ಬೆಳಗೆರೆಯವರು ಆಟದಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ಆದರೆ ಈ ಶನಿವಾರದ ತನಕ ಅವರು ಈ ಮನೆಯಲ್ಲಿ ಮುಂದುವರೆಯುತ್ತಾರೆ. ಅವರನ್ನು ಅತಿಥಿಯಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ” ಎಂದು ‘ಬಿಗ್ ಬಾಸ್’ ಘೋಷಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top