fbpx
ಸಮಾಚಾರ

ನಾರಾಯಣ ಮೂರ್ತಿ- ಸುಧಾಮೂರ್ತಿ ಬಯೋಪಿಕ್‌ಗೆ ‘ಮೂರ್ತಿ’ ಶೀರ್ಷಿಕೆ!

ಖ್ಯಾತ ಉದ್ಯಮಿ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಅವರ ಜೀವನ ಕಥೆ ಸಿನಿಮಾ ಆಗ್ಬೇಕು ಅಂತ ಸಾವಿರಾರು ಜನರು ಆಸೆ ವ್ಯಕ್ತಪಡಿಸುತ್ತಿದ್ದರು. ಇದೀಗ, ಅವರ ಆಸೆ ಈಡೇರುತ್ತಿದ್ದು ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಬಯೋಪಿಕ್ ಸಿನಿಮಾ ಆಗುತ್ತಿರುವುದು ಈಗ ಅಧಿಕೃತವಾಗಿ ಘೋಷಣೆಯಾಗಿದೆ.

ಇನ್ಫೋಸಿಸ್ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ದಂಪತಿಯ ಅವರ ಜೀವನಾಧಾರಿತ ಚಿತ್ರ ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿದ್ದು ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಚಿತ್ರಕ್ಕೆ ಮೂರ್ತಿ ಎಂಬ ಶೀರ್ಷಿಕೆ ಇಟ್ಟಿದ್ದಾರೆ. 2016ರಲ್ಲಿ ನಿಲ್ ಬ್ಯಾಟರಿ ಸನ್ನಾಟಾ ಚಿತ್ರವನ್ನು ನಿರ್ದೇಶಿಸಿದ್ದ ಅಶ್ವಿನಿ ‘ಮೂರ್ತಿ’ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರಕ್ಕೆ ನಿತೇಶ್ ತಿವಾರಿ ಮತ್ತು ಮಹವೀರ್ ಜೈನ್ ಬಂಡವಾಳ ಹೂಡುತ್ತಿದ್ದಾರೆ.

2020ರ ಜನವರಿ 24ಕ್ಕೆ ಆ ಸಿನಿಮಾ ತೆರೆಕಾಣಲಿದೆ. ಅದರ ಕೆಲಸಗಳು ಮುಗಿಯುತ್ತಿದ್ದಂತೆಯೇ ಕರ್ನಾಟಕದ ಹೆಮ್ಮೆಯ ದಂಪತಿಗಳ ಬಯೋಪಿಕ್‌ಗೆ ಚಾಲನೆ ನೀಡಲಿದ್ದಾರೆ ಅಶ್ವಿನಿ. ಈ ಸಿನಿಮಾ ಕನ್ನಡದಲ್ಲಿ ಸಿದ್ಧವಾಗಲಿದೆಯೇ ಅಥವಾ ಹಿಂದಿಯಲ್ಲಿ ಮಾತ್ರ ನಿರ್ಮಾಣವಾಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top