fbpx
ಸಮಾಚಾರ

“ಬಿಎಸ್​ವೈ ಅಧಿಕಾರ ಪೂರೈಸಲ್ಲ, ಡಿಕೆಶಿ ಸಿಎಂ ಆಗೇ ಆಗ್ತಾರೆ” ಬ್ರಹ್ಮಾಂಡ ಗುರೂಜಿ ಭವಿಷ್ಯ

ಎರಡನೇ ಬಾರಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿಗೆ ದೊಡ್ಡ ಕಂಟಕ ಎದುರಾಗಲಿದೆ. ಇದೇ ನವೆಂಬರ್​ 4ರಿಂದ ಸಂಕ್ರಾಂತಿವರೆಗೆ ಮೋದಿಗೆ ಸಮಯ ಸರಿಯಿಲ್ಲ. ಅವರಿಗೆ ಕಷ್ಟ ಎದುರಾಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಹೌದು ಹಾಸನಾಂಬೆ ದರ್ಶನದ ಬಳಿಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವ ಭವಿಷ್ಯ ನುಡಿದಿರುವ ಬ್ರಹ್ಮಾಂಡ ಗುರೂಜಿ, ‘ನವೆಂಬರ್ 4 ರಿಂದ ಮೋದಿಗೆ ಗಂಡಾಂತರ ಇದೆ. ಈ ಅವಧಿಯಲ್ಲಿ ಅಪಮೃತ್ಯು ಗಂಡಾಂತರದಿಂದ ಪಾರಾದರೆ ಇನ್ನೂ ಎರಡು ಮುಕ್ಕಾಲು ವರ್ಷ ಪ್ರಧಾನಿಯಾಗಿರ್ತಾರೆ’ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯ ರಾಜಕೀಯ ಭವಿಷ್ಯ ಏನಾಗಬಹುದೆಂಬ ಕುರಿತು ಮಾತನಾಡಿರುವ ಬ್ರಹ್ಮಾಂಡ ಗುರೂಜಿ, ‘ರಾಜ್ಯದಲ್ಲಿ ಈ ಹಿಂದೆ ಇದ್ದವರು ಮತ್ತೆ ಯಾರೂ ಸಿಎಂ ಆಗಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಕಷ್ಟ ಎದುರಾಗಲಿದೆ. ಯಡಿಯೂರಪ್ಪ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಅವಧಿಯನ್ನು ಪೂರೈಸುವುದಿಲ್ಲ. ಅವರ ಬಳಿಕ ಹೊಸಬರು ರಾಜ್ಯದ ಸಿಎಂ ಆಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ” ಎಂದರು.

ಇನ್ನು ಇಡಿ ಪ್ರಕರಣದಲ್ಲಿ ಸಿಲುಕಿರುವ ಡಿ ಕೆ ಶಿವಕುಮಾರ್ ರಾಜಕೀಯ ಭವಿಷ್ಯ ನುಡಿದಿದ್ದು “ಕೋಟಿ ಕೋಟಿ ಹಣ ಮಾಡಿದವರು ಕೃಷ್ಣನ ಜನ್ಮಸ್ಥಳಕ್ಕೆ ಸೇರಲೇ‌ಬೇಕು. ಮುಂದಿನ ಹತ್ತು ವರ್ಷದಲ್ಲಿ ಒಮ್ಮೆ ಡಿಕೆ ಶಿವಕುಮಾರ್​ ಸಿಎಂ‌ ಆಗೋದು ನಿಶ್ಚಿತ. ಹತ್ತು ವರ್ಷಗಳ ನಡುವೆ ಒಮ್ಮೆ‌ ಐದು ವರ್ಷ ಸಿಎಂ ಆಗುತ್ತಾರೆ” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top