fbpx
ಸಮಾಚಾರ

ಗೌರಿ ಲಂಕೇಶ್ ಹತ್ಯೆ ಬಗ್ಗೆ ಯಾರಿಗೂ ತಿಳಿಯದ ವಿಚಾರ ದೊಡ್ಮನೆಯಲ್ಲಿ ಬಿಚ್ಚಿಟ್ಟರು ರವಿ ಬೆಳಗೆರೆ.

ಬಿಗ್​ಬಾಸ್​ ಸೀಸನ್​ 7 ಪ್ರಾರಂಭವಾಗಿದೆ. 17 ಸ್ಪರ್ಧಿಗಳು ಕೂಡ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ. ಮಾತ್ರವಲ್ಲದೆ, ಹಿರಿಯ ಪತ್ರಕರ್ತ ರವಿ ಬೆಳಗೆರೆ ಕೂಡ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಜೊತೆಗೂಡಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ತಮ್ಮ ಅನುಭವ ಕಥೆಗಳನ್ನು ಸ್ಪರ್ಧಿಗಳ ಜೊತೆಗೆ ಬಿಚ್ಚಿಡುತ್ತಿದ್ದಾರೆ. ಅಂತೆಯೇ ಸ್ಪರ್ಧಿಗಳನ್ನೆಲ್ಲಾ ಕೂರಿಸಿಕೊಂಡು ಕತೆ ಹೇಳಿಕೊಳ್ಳುತ್ತಿರಬೇಕಾದರೆ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ವಿಚಾರ ಪ್ರಸ್ತಾಪಿಸಿದ್ದಾರೆ.

 

 

“ಗೌರಿ ಲಂಕೇಶ್ ಮರ್ಡರ್ ಕೇಸ್ ನಲ್ಲಿ ಬಹಳ ನಿಗೂಢ ಅನಿಸಿದ್ದು ಏನು ಅಂದರೆ ಅಮೋಲ್ ಕಾಳೆ ಒಂದೇ ಆಯುಧ ಇಟ್ಟುಕೊಂಡು ನಾಲ್ಕು ಬೇರೆ ಬೇರೆಯವರನ್ನು ಮರ್ಡರ್ ಮಾಡಿಸುತ್ತಾನೆ, ಎಲ್ಲರನ್ನೂ ಒಂದೇ ರೀತಿಯಲ್ಲಿ ಸಾಯಿಸಿದ್ದಾನೆ” ಎಂದು ‘ಬಿಗ್ ಬಾಸ್’ ಮನೆಯೊಳಗೆ ರವಿ ಬೆಳಗೆರೆ ಹೇಳಿದ್ದಾರೆ.

“ಗೌರಿ ಲಂಕೇಶ್ ತಂಗಿ ಮಧ್ಯಾಹ್ನ ಚಪಾತಿ, ಪಲ್ಯ ಮಾಡಿಕೊಟ್ಟಿರುತ್ತಾಳೆ. ಮನೆಗೆ ಬಂದ ಗೌರಿ ಮತ್ತೆ ಕಾರಿನ ಬಳಿ ಹೋಗಿ ಆ ಬಾಕ್ಸ್ ತರಬೇಕಾದರೆ ಶೂಟ್ ಮಾಡುತ್ತಾರೆ. ಆಗ ಗೋರಿ ಓಡಿ ಹೋಗಬೇಕಾದರೆ ಮತ್ತೆ ಮೂರು ಭಾರಿ ಗುಂಡು ಹಾರಿಸಿದ್ದಾರೆ.” ಎಂದು ರವಿ ಬೆಳಗೆರೆ ಹೇಳಿದ್ದಾರೆ.

“ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಶೂಟ್ ಮಾಡಿದ ಮಾಸ್ಕ್ ಧರಿಸಿರುವ ಯುವಕನ ನಾಲ್ಕು ಸೆಕೆಂಡ್ ಗಳ ದೃಶ್ಯ ಅಷ್ಟೇ. ಇದನ್ನ ಇಟ್ಟುಕೊಂಡು ಬೆಂಗಳೂರು ಪೊಲೀಸರು ಎಂಟು ತಿಂಗಳು ಬೆಂಗಳೂರು ಹುಚ್ಚರಾಗಿಬಿಟ್ಟರು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಅದು ಬರೋಬ್ಬರಿ ಹತ್ತು ಸಾವಿರ ಪುಟಗಳಿವೆ” ಎಂದು ಎಳೆ ಎಳೆಯಾಗಿ ಹೇಳುವ ವಿಚಾರಗಳನ್ನು ಕೇಳಿದ ಬಿಗ್ ಬಾಸ್ ಸ್ಪರ್ಧಿಗಳು ಶಾಕ್‌ ಆಗುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top