fbpx
ಸಮಾಚಾರ

ESI ಆಸ್ಪತ್ರೆಯನ್ನು ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಪಿಸಿ ಮೋಹನ್: ಪಾರದರ್ಶಕತೆಗಾಗಿ ಕಾರ್ಯಾಚರಣೆ ಲೈವ್

ಸಂಸದ ಪಿಸಿ ಮೋಹನ್ ಅವರು ಇಂದು ಬೆಂಗಳೂರಿನ ESI ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೂಲಸೌಕರ್ಯ ಹಾಗೂ ಸೇವೆಗಳ ಕುರಿತು ಪರಿಶೀಲನೆ ನಡೆಸಿ ಅಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿ, ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳನ್ನು ಮಾತನಾಡಿಸಿ ಅಹವಾಲು ಸ್ವೀಕರಿಸಲಾಯಿತು.

ಈ ವೇಳೆ ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳು ಮತ್ತು ಪ್ರತಿ ವಾರ್ಡ್ ನಲ್ಲಿಯೂ ಸ್ವಚ್ಛತೆ ಜೊತೆಗೆ ರೋಗಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ತರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

 

 

ಇದಾದ ಬಳಿಕ ಆಸ್ಪತ್ರೆಯ ಸಿಬ್ಬಂದಿಯ ಜೊತೆಗೆ ಒಂದು ಧೀರ್ಘ ಸಭೆಯನ್ನು ನಡೆಸಿ ಆಸ್ಪತ್ರೆಯ ಕುಂದು ಕೊರತೆ, ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.. ಕೆಲವೊಂದು ಸಮಸ್ಯೆಗಳನ್ನು ವೈಯಕ್ತಿಯ ಶ್ರದ್ಧೆವಹಿಸಿ ಪರಿಹರಿಸುವುದಾಗಿ ಸಂಸದ ಪಿಸಿ ಮೋಹನ್ ಅವರು ಆಸ್ಪತ್ರೆಯ ಸಿಬ್ಬಂದಿಗೆ ಭರವಸೆ ನೀಡಿದರು.

ವಿಶೇಷ ಅಂದರೆ ಈ ಸಭೆಯನ್ನು ಸಭೆಯನ್ನು ಲೈವ್ ಮಾಡಿಸುವ ಮೂಲಕ ಪಾರದರ್ಶಿಕತೆಗೆ ಮುನ್ನುಡಿ ಬರೆದಿದ್ದಾರೆ.. ಸಭೆಯಲ್ಲಿ ಚರ್ಚಿಸಲಾದ ವಿಚಾರಗಳು ಸಾರ್ವಜನಿಕರಿಗೂ ಗೊತ್ತಾಗಬೇಕು ಎಂಬ ಉದ್ದೇಶದಿಂದ ಲೈವ್ ಮಾಡಿದ್ದು ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಸಭೆಯನ್ನು ಟ್ವಿಟ್ಟರ್ ನಲ್ಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯವರ ಅಧಿಕೃತ ಖಾತೆಯಲ್ಲಿ ಲೈವ್ ಪ್ರಸಾರ ಮಾಡಲಾಗಿದೆ.

 

 

ಸಭೆಯಲ್ಲಿ ಚರ್ಚಿಸಲಾದ ಅನೇಕ ವಿಚಾರಗಳನ್ನು ಸಾರ್ವಜನಿಕರೂ ಕೂಡ ಅತ್ಯಂತ ಸುಲಭವಾಗಿ ನೋಡಲು ಕೈಗೊಂಡು ಈ ಕ್ರಮ ನಿಜಕ್ಕೂ ಮೆಚ್ಚುವಂತದ್ದು ಎಂದು ನೆಟ್ಟಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.. ಸದ್ಯ ಕಾರ್ಮಿಕ ಇಲಾಖೆಯಲ್ಲಿ ಪ್ರಾರಂಭವಾಗಿರುವ ಈ ಕಾರ್ಯ ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ಶುರುವಾದರೆ ಸ್ವಾಗತಾರ್ಹ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top