fbpx
ಸಮಾಚಾರ

ಚನ್ನೈನಲ್ಲಿ ಕುರಿ ಕಾಯುತ್ತಿದ್ದಾರೆ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಧ್ವನಿಯೆತ್ತಿದ ವಿಚಾರಗಳೇ ಹೆಚ್ಚು ರಾರಾಜಿಸುತ್ತಿದೆ. ಕೆಲ ದಿನಗಳ ಹಿಂದೆ ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ ಎಂದಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆನಂತರದ ದಿನಗಳಲ್ಲಿ ಎಲ್ಲಿಯೂ ಸುದ್ದಿಯಾಗದೆ ಎಂದಿನಂತೆ ತಮ್ಮ ಪರ ಭಾಷೆಯ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

 

 

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಚೆನ್ನೈನಲ್ಲಿ ಕುರಿ ಕಾಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಶ್ಮಿಕಾ ಹಳ್ಳಿ ಹುಡುಗಿಯಂತೆ ಲಂಗ ದಾವಣಿ ಧರಿಸಿ, ಕೈಯಲ್ಲಿ ಉದ್ದನೆಯ ಕೋಲು ಹಿಡಿದು ಕುರಿಗಳನ್ನು ಕಾಯುತ್ತಿದ್ದಾರೆ. ಈ ವೇಳೆ ಅವರು ಕೈಯಲ್ಲಿ ಕೋಲು ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೂಡ ನೀಡಿದ್ದಾರೆ.

ನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದು, ಚಿತ್ರೀಕರಣದ ಸೆಟ್​ನಲ್ಲಿ ರಶ್ಮಿಕಾ ಕುರಿ ಕಾಯುವಾಗ ಈ ಚಿತ್ರಗಳನ್ನು ತೆಗೆಯಲಾಗಿದೆ. ಈ ಚಿತ್ರಗಳು ರಶ್ಮಿಕಾರ ಅಭಿಮಾನಿಗಳ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಲಾಗಿದೆ.

ತಮಿಳು ನಟ ಕಾರ್ತಿಗೆ ಕಿರಿಕ್ ಸುಂದರಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಸುಲ್ತಾನ್ ಎಂದು ಟೈಟಲ್ ಇಡುವ ಸಾಧ್ಯತೆ ಇದೆ. ಆದ್ರೆ ಟೈಟಲ್ ಚಿತ್ರತಂಡ ಇನ್ನೂ ಬಹಿರಂಗ ಪಡಿಸಿಲ್ಲ. ಚಿತ್ರಕ್ಕೆ ಭಾಗ್ಯರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಶ್ಮಿಕಾ ಕುರಿ ಕಾಯುತ್ತಿರುವ ಫೋಟೋಗಳ ಜೊತೆಗೆ ತರಕಾರಿ ಮಾರುವ ಫೋಟೋ ಕೂಡ ರಿವೀಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top