fbpx
ಸಮಾಚಾರ

ಶಂಕರ್‌ನಾಗ್‌ಗೆ ಅವರ ಎದುರೇ ‘ಕೋತಿ’ ಎಂದಿದ್ದರಂತೆ ಆ ಬಜಾರಿ ನಟಿ: ರವಿ ಬೆಳಗೆರೆ ಹೇಳಿದ ಕುತೂಹಲಕಾರಿ ಸಂಗತಿ.

ಬಿಗ್​ಬಾಸ್​ ಸೀಸನ್​ 7 ಪ್ರಾರಂಭವಾಗಿದೆ. 17 ಸ್ಪರ್ಧಿಗಳು ಕೂಡ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ. ಮಾತ್ರವಲ್ಲದೆ, ಹಿರಿಯ ಪತ್ರಕರ್ತ ರವಿ ಬೆಳಗೆರೆ ಕೂಡ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಜೊತೆಗೂಡಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ತಮ್ಮ ಅನುಭವ ಕಥೆಗಳನ್ನು ಸ್ಪರ್ಧಿಗಳ ಜೊತೆಗೆ ಬಿಚ್ಚಿಡುತ್ತಿದ್ದಾರೆ. ಅಂತೆಯೇ ಸ್ಪರ್ಧಿಗಳನ್ನೆಲ್ಲಾ ಕೂರಿಸಿಕೊಂಡು ಕತೆ ಹೇಳಿಕೊಳ್ಳುತ್ತಿರಬೇಕಾದರೆ ಶಂಕರ್ ನಾಗ್- ಮಂಜುಳಾ ಬಗೆಗಿನ ಕತೆಯೊಂದನ್ನು ಹಂಚಿಕೊಂಡಿದ್ದಾರೆ.

 

 

“ನಟಿ ಮಂಜುಳಾ ಅವರ ಎದುರು ಮೊದಲ ಬಾರಿ ಶಂಕರ್​​ನಾಗ್​ ಅವರನ್ನು ಕರೆದುಕೊಂಡು ಬಂದು ಇವರೇ ನಿಮ್ಮ ಸಿನಿಮಾದ ಹೀರೋ ಎಂದು ಪರಿಚಯಿಸಿದಾಗ, ಯಾವ್ಯಾವುದೋ ಕೋತಿಯನ್ನೆಲ್ಲ ಕರೆದುಕೊಂಡು ಬಂದು ಹೀರೋ ಎನ್ನುತ್ತೀರಲ್ಲಾ ಎಂದು ಮಂಜುಳಾ ಶಂಕರ್​ನಾಗ್​ ಎದುರೇ ಹೇಳಿದರು. ಅವಳು ತುಂಬಾ ಧೈರ್ಯವಂತೆ”

“ಆದರೆ ದುರಂತವೆಂದರೆ ಮಂಜುಳಾ ಬೆಂಕಿ ಅನಾಹುತದಲ್ಲಿ ಮೃತಪಟ್ಟಾಗ ಆಕೆಯ ಮೃತದೇಹವನ್ನು ತಂದಿದ್ದೇ ಶಂಕರ್​ನಾಗ್”​ ಎಂದು ರವಿ ಬೆಳಗೆರೆಯವರು ಹಳೇ ದಿನಗಳನ್ನು ನೆನಪಿಸಿಕೊಂಡರು. ಕಾಫಿ ಕುಡಿಯುತ್ತ ಅವರು ಹೇಳಿದ ಕತೆ ಕೇಳಿ ಉಳಿದ ಸ್ಪರ್ಧಿಗಳು ಹೌದಾ? ಎಂದು ಆಶ್ಚರ್ಯಚಕಿತರಾಗಿ ಕೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top