fbpx
ಸಮಾಚಾರ

“ಸಿದ್ದರಾಮಯ್ಯ ಭೂಮಿ ಮೇಲೆ ಇರಬಾರದು” ಸಚಿವ ಶ್ರೀ ರಾಮುಲು.

ಸಾವರ್ಕರ್‌ಗೆ ಭಾರತ ರತ್ನ ಕೊಡುವ ಬಗ್ಗೆ ಬಿಜೆಪಿ ಪ್ರಣಾಳಿಕೆ ಹೊರಡಿಸಿರುವ ಕುರಿತು ನಿನ್ನೆ ಮಾತನಾಡಿದ್ದ ಸಿದ್ದರಾಮಯ್ಯ, ‘ಸಾವರ್ಕರ್ ಬದಲಿಗೆ ಗೋಡ್ಸೆಗೆ ಭಾರತ ರತ್ನ ಕೊಟ್ಟು ಬಿಡಿ’ ಎಂದು ವ್ಯಂಗ್ಯ ಮಾಡಿದ್ದರು. ಆದರೆ ವ್ಯಂಗ್ಯವನ್ನು ಗಂಭೀರವಾಗಿ ಪರಿಗಣಿಸಿದಂತಿರುವ ರಾಮುಲು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜನರನ್ನು ಪ್ರಚೋದಿಸಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಅವರು ಅದೇ ಸಂಸ್ಕಾರದಿಂದ ಬೆಳೆದು ಬಂದ ಕಾರಣದಿಂದ ಈ ರೀತಿ ಮಾತನಾಡುತ್ತಿದ್ದಾರೆ. ಆದರೆ ಅವರು ಸಾರ್ವಕರ್ ಅವರ ಬಗ್ಗೆ ಓದಿಕೊಂಡು ಮಾತನಾಡಲಿ. ಆದರೆ ಈ ರೀತಿ ಮಾತನಾಡುವವರನ್ನು ಜನರು ಸಹಿಸಬಾರದು. ಹಗುರವಾಗಿ ಮಾತನಾಡುವವರು ಈ ಮಣ್ಣಿನಲ್ಲಿ ಇರಬಾರದು ಎಂದರು.

ಪದೇ ಪದೇ ಗಾಂಧಿ, ಗೂಡ್ಸೆ ಬಗ್ಗೆ ಮಾತನಾಡುವ ಸಂಪ್ರದಾಯದಲ್ಲಿ ಸಿದ್ದರಾಮಯ್ಯ ಬೆಳೆದು ಬಂದಿದ್ದಾರೆ. ಈ ರೀತಿ ಮಾತನಾಡುವ ಸಿದ್ದರಾಮಯ್ಯ ಅಂತಹವರು ಈ ಭೂಮಿ ಮೇಲೆ ಇರಬಾರದು ಎಂದರು.

ಅಲ್ಲದೇ ನಳೀನ್ ಕುಮಾರ್ ಕಟೀಲ್ ಅವರು ಬಿಜೆಪಿಯ ಸಂತೋಷ್ ರಿಮೋಟ್ ಕಂಟ್ರೋಲ್ ಇದ್ದಂತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೇ ನೀಡಿದ ಅವರು, ಕಟೀಲ್ ಸಂತೋಷ್ ರವರ ರಿಮೋಟ್ ಕಂಟ್ರೋಲ್ ಅಲ್ಲ. ಸಿದ್ದರಾಮಯ್ಯ ಅವರು ಸೋನಿಯಾ ಗಾಂದಿ ರಿಮೋಟ್ ಕಂಟ್ರೋಲ್ ಇರಬಹುದು ಎಂದು ಆರೋಗ್ಯ ಸಚಿವರಾದ ಶ್ರೀರಾಮುಲು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top