fbpx
ಸಮಾಚಾರ

ಶ್ರೀಮನ್ನಾರಾಯಣನ ಆಗಮನಕ್ಕೆ ಮುಹೂರ್ತ ಫಿಕ್ಸ್: ಅಧಿಕೃತವಾಗಿ ರಿಲೀಸ್ ಡೇಟ್ ಘೋಷಿಸಿದ ಚಿತ್ರತಂಡ.

2016ರಲ್ಲಿ ತೆರೆ ಕಂಡ ‘ಕಿರಿಕ್ ಪಾರ್ಟಿ’ ಸಿನಿಮಾದ ನಂತರ, ನಟ ರಕ್ಷಿತ್ ಶೆಟ್ಟಿ ನಟನೆಯ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲಾ. ಹೀಗಾಗಿ ಇವರ ಮುಂದಿನ ಸಿನಿಮಾ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿವೆ. ಆದರೆ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆ ಸಿನಿಪ್ರೇಮಿಗಳನ್ನು ಕಾಡುತ್ತಿರೋದು ಸುಳ್ಳಲ್ಲಾ. ಹೀಗಾಗಿ ಈ ಪ್ರಶ್ನೆಗೆ ಸ್ವತಃ ಚಿತ್ರತಂಡವೇ ನಿಖರವಾದ ಉತ್ತರ ನೀಡಿದೆ.

 

 

ರಿಲೀಸ್‌ ಡೇಟ್‌ ಫಿಕ್ಸ್‌ ಆಗಿರೋ ಬಗ್ಗೆ ಟ್ವೀಟ್ ಮಾಡಿರೋ ರಕ್ಷಿತ್‌ ಶೆಟ್ಟಿ ಡಿಸೆಂಬರ್‌ 27ಕ್ಕೆ ರಿಲೀಸ್ ಆಗಲಿದೆ ಅಂತಾ ಮಾಹಿತಿ ಹಂಚಿಕೊಂಡಿದ್ದಾರೆ. ವರ್ಷದ ಕೊನೆಯ ಶುಕ್ರವಾರದಂದೂ ಅವನೇ ಶ್ರೀಮನ್ನಾರಾಯಣ ರಿಲೀಸ್ ಅಂತಾ ಘೋಷಿಸಿದ್ದಾರೆ. ‘ಕಿರಿಕ್ ಪಾರ್ಟಿ’ ಸಿನಿಮಾ ಡಿಸೆಂಬರ್ 30, 2016 ರಲ್ಲಿ ರಿಲೀಸ್ ಆಗಿದ್ದು, ಅದೇ ತಿಂಗಳು ‘ಅವನೇ ಶ್ರೀಮನ್ನಾರಾಯಣ’ ಬಿಡುಗಡೆ ಆಗುತ್ತಿದೆ. ಮೂರು ವರ್ಷಗಳ ನಂತರ ರಕ್ಷಿತ್ ಶೆಟ್ಟಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

 

 

ಈ ಹಿಂದೆ ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳದ ರೀತಿಯಲ್ಲಿ ರಕ್ಷಿತ್ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ನವ ನಿರ್ದೇಶಕ ಸಚಿನ್ ಆಕ್ಷನ್ ಕಟ್ ಹೇಳ್ತಿದ್ದು ಪುಷ್ಕರ್ ಸಿನಿಮಾಸ್ ಹಾಗೂ ಪರಂವಾ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಉಳಿದಂತೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top