fbpx
ಸಮಾಚಾರ

“ನನ್ನ ಕ್ಷೇತ್ರಕ್ಕೆ ಕೈ ಹಾಕಿದರೆ ಕೈ ಕತ್ತರಿಸುವೆ” ಶಾಸಕನ ವಾರ್ನಿಂಗ್.

ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಮಾಡುವ ವಿಚಾರದಲ್ಲಿ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಹಾಗೂ ಗೌರಿಬಿದನೂರು ಕ್ಷೇತ್ರದ ಶಾಸಕರಾದ ಮಾಜಿ ಕೃಷಿ ಸಚಿವ ಶಿವಶಂಕರರೆಡ್ಡಿ ನಡುವೆ ವಾಕ್ಸಮರ ಮುಂದುವರಿದೆ.

‘ನನ್ನ ಕ್ಷೇತ್ರಕ್ಕೆ ಕೈ ಹಾಕಿದರೆ ಕೆ ಕತ್ತರಿಸುತ್ತೇನೆ ಎಂದು ಎನ್‌.ಎಚ್‌.ಶಿವಶಂಕರರೆಡ್ಡಿ ಹೇಳಿದ್ದರೆ, ಅದಕ್ಕೆ ಟ್ವೀಟರ್‌ನಲ್ಲಿ ತಿರುಗೇಟು ನೀಡಿರುವ ಡಾ. ಸುಧಾಕರ್‌ ನನ್ನ ಕೈ ಅಲ್ಲ, ಎದೆ ಬಗೆದರೂ ಮಂಚೇನಹಳ್ಳಿ ತಾಲೂಕು ರಚನೆ ವಿಚಾರದಲ್ಲಿ ನಾನು ನನ್ನ ಜನರಿಗೆ ಬದ್ಧನಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಇನ್ನು ಈ ಎಚ್ಚರಿಕೆಗೆ ಪ್ರತ್ಯುತ್ತರ ನೀಡಿರುವ ಸುಧಾಕರ್​, ನನ್ನ ಕೈ ಅಲ್ಲ ಎದೆ ಬಗಿದರೂ ಮಂಚೇನಹಳ್ಳಿ ತಾಲೂಕು ರಚನೆಯ ವಿಷಯದಲ್ಲಿ ನಾನು ನನ್ನ ಜನರಿಗೆ ಬದ್ಧವಾಗಿರುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಶಿವಶಂಕರ ರೆಡ್ಡಿ ಮೇಲೆ ಕ್ರಮ ಜರುಗಿಸಲಿ. ಇಂದು ಇಡೀ ಜಗತ್ತಿಗೆ ಅವರ ಗೂಂಡಾ ಮನಸ್ಥಿತಿಯ ಪರಿಚಯವಾಗಿದೆ. ಸಮಾಜಕ್ಕೆ ಮಾದರಿಯಾಗಬೇಕಾದ ರಾಜಕಾರಣಿಗಳು ಇಂತಹ ಕೀಳು ಮಟ್ಟಕ್ಕೆ ಇಳಿಯುವುದು ದುರ್ದೈವ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top