fbpx
ಸಮಾಚಾರ

“ಸಿನಿಮಾ ಇಲ್ಲದೇ ಕ್ಯಾಂಟೀನ್ ತೆರೆದಿದ್ದ ಶಂಕರ್ ನಾಗ್” ಶಂಕ್ರಣ್ಣನ ಬಗ್ಗೆ ಗೊತ್ತಿರದ ವಿಚಾರ ಬಿಚ್ಚಿಟ್ಟ ಜೈ ಜಗದೀಶ್.

ಬಿಗ್​ಬಾಸ್​ ರಿಯಾಟಲಿ ಶೋ ದಿನದಿಂದ ದಿನಕ್ಕೆ ತನ್ನ ಕುತೂಹಲವನ್ನು ದ್ವಿಗುಣಗೊಳಿಸುತ್ತಿದೆ. ಚಿತ್ರರಂಗದಲ್ಲಿ ಘಟಿಸಿಹೋದಂತಹ ಹಲವು ಘಟನೆಗಳು ಬಿಗ್​ಬಾಸ್​ನಲ್ಲಿ ಅನಾವರಣಗೊಳ್ಳುತ್ತಿದೆ. ಮೊನ್ನೆ ಶಂಕರ್​ನಾಗ್​ ಹಾಗೂ ಮಂಜುಳಾ ಬಗ್ಗೆ ರವಿಬೆಳಗೆರೆ ಅವರು ಮಾತನಾಡಿದ್ದರು. ಇದೀಗ ಹಿರಿಯ ನಟ ಜೈ ಜಗದೀಶ್ ಶಂಕರ್​ನಾಗ್​ ಬಗ್ಗೆ ಕುತೂಹಲಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

 

 

ಹೈ ಡಿಮ್ಯಾಂಡ್ ನಟನಾಗಿ 80 ರ ದಶಕದಲ್ಲಿ ಚಿತ್ರರಂಗವನ್ನು ಆಳಿದ ಶಂಕರ್‌ ನಾಗ್ ಗೆ ಒಂದು ಸಮಯದಲ್ಲಿ ಅವಕಾಶವೇ ಇಲ್ಲದಂತಾಗಿತ್ತು. ಇದನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೇ ತನ್ನ ಕಷ್ಟವನ್ನು ತಾನೇ ಎದುರಿಸಬೇಕೆಂದು ಕ್ಯಾಂಟೀನ್ ನಡೆಸುತ್ತಿದ್ದರಂತೆ. ಆ ನಂತರ ಅವಕಾಶ ಸಿಕ್ಕಿ ಹಿಂತಿರುಗಿ ನೋಡಲೇ ಇಲ್ಲ. ಮಾಡಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಕನ್ನಡ ಚಿತ್ರರಂಗವನ್ನು ಆಳಿದರು.

”ಒಬ್ಬ ಫೇಮಸ್ ನಟ, ಮಾರ್ಕೆಟ್ ಬಿದ್ದು ಹೋದಾಗ ಕ್ಯಾಂಟೀನ್ ಇಟ್ಟುಕೊಂಡಿದ್ದರು. ಯಾರು ಹೇಳಿ ನೋಡೋಣ.?” ಅಂತ ‘ಬಿಗ್ ಬಾಸ್’ ಮನೆಯಲ್ಲಿ ಜೈಜಗದೀಶ್ ಕೇಳಿದರು. ಅದಕ್ಕೆ ಯಾರಿಗೂ ಸರಿಯಾದ ಉತ್ತರ ಗೊತ್ತಿರಲಿಲ್ಲ. ಆಗ, ಅದು ಬೇರೆ ಯಾರೂ ಅಲ್ಲ ”ಶಂಕರ್ ನಾಗ್” ಅಂತ ಜೈಜಗದೀಶ್ ಹೇಳಿದರು. ‘ ”ಮೂರು ವರ್ಷ ಮಾರ್ಕೆಟ್ ಬಿದ್ದು ಹೋಗಿತ್ತು. ಆಗ ಕ್ವೀನ್ಸ್ ಪ್ರತಿಮೆ ಬಳಿ ಮೆಟಡೋರ್ ನಲ್ಲಿ ಕ್ಯಾಂಟೀನ್ ರನ್ ಮಾಡುತ್ತಿದ್ದರು ಶಂಕರ್. ಆಮೇಲೆ ಮತ್ತೆ ಟಾಪ್ ಗೆ ಬಂದರು”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top