fbpx
ಸಮಾಚಾರ

ನಟಿ ಸಂಗೀತಾ ಭಟ್ ಗಂಡನಿಗೆ ಯಶ್ ಅಭಿಮಾನಿಗಳಿಂದ ಜೀವ ಬೆದರಿಕೆ!

ನಟಿ ಸಂಗೀತ ಭಟ್ ಅವರ ಪತ್ನಿ ಕನ್ನಡದ ಸ್ಯಾಂಡ್ ಅಪ್ ಕಾಮಿಡಿಯನ್ ಸುದರ್ಶನ್ ರಂಗಪ್ರಸಾದ್ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದ ಜೀವ ಬೆದರಿಕೆ ಬಂದಿದೆಯಂತೆ. ಈ ವಿಚಾರವನ್ನು ಅವರೇ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

 

 

ಎರಡು ವರ್ಷದ ಹಿಂದೆ ಸುದರ್ಶನ್ ಒಂದು ಕಾಮಿಡಿ ವಿಡಿಯೋ ಮಾಡಿದ್ದರು. ಅಲ್ಲಿ ಯಶ್ ಅವರ ಡೈಲಾಗ್ ಬಳಸಿ ಕಾಮಿಡಿ ಮಾಡಿದ್ದರು. ”ನಾವು ಸೆಕೆಂಡ್ ಪಿಯುಸಿ ಇದ್ದಾಗ ಮನೆಯವರು, ಸಂಬಂಧಿಗಳು ಬರೀ ‘ಬಿಲ್ಡಪ್ ಡೈಲಾಗ್’ ಹೊಡೆಯುತ್ತಿದ್ದರು. ಅದೇ ನಮ್ ರಾಕಿಂಗ್ ಸ್ಟಾರ್ ಯಶ್ ತರ” ಎಂದು ಸುದರ್ಶನ್ ರಂಗಪ್ರಸಾದ್ ಹೇಳಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ ‘ಅಣ್ತಾಮ್ಮ’, ‘ಹವಾ’ ಎಂದು ಯಶ್ ಡೈಲಾಗ್ ಅನ್ನು ಇಮಿಟೇಟ್ ಮಾಡಿದ್ದರು.

ಈ ಕಾಮಿಡಿ ವಿಡಿಯೋವನ್ನು ಸಹಿಸದ ಯಶ್ ಅಭಿಮಾನಿಗಳು ಬಾಯಿಗೆ ಬಂದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ, ಈ ಬಗ್ಗೆ ಸುದರ್ಶನ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸೈಬರ್ ಕ್ರೈಮ್‌ಗೂ ಈ ಬಗ್ಗೆ ದೂರು ನೀಡಿದ್ದಾರೆ.

 

 

ಸುದರ್ಶನ್ ಹೇಳಿದ್ದೇನು?
” ಈ ಎರಡು ವರ್ಷದ ಹಳೇ ವಿಡಿಯೋದಲ್ಲಿ ನಾನು ಯಶ್ ಅವರ ಡೈಲಾಗ್ ಉಪಯೋಗಿಸಿ ನಮ್ಮ ಕಾಲೇಜ್ ಹಾಗೂ ಕುಟುಂಬದವರು ಯಾವ ರೀತಿ ಮಾತಾಡ್ತಾರೆ ಅನ್ನೋ ಬಗ್ಗೆ ಹಾಸ್ಯ ನಾಟಕ ಮಾಡಿದ್ದೇನೆ ವಿನಃ ಯಶ್ ಅವರನ್ನು ಟೀಕೆ ಮಾಡುವ ಯಾವ ಉದ್ದೇಶವೂ ನನಗೂ ಹಾಗೂ ಲೋಲ್‌ಬಾಗ್‌ಗೂ ಇಲ್ಲ. ನಾನು ಸಹ ಯಶ್ ಅವರ ಜೊತೆ ನಟಿಸಿದ್ದೀನಿ ನಾನು ಅವರ ಅಭಿಮಾನಿ ಕೂಡ.

ಈ ವೀಡಿಯೋವನ್ನು ಅಪಾರ್ಥ ಮಾಡಿಕೊಂಡು ಅದನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ, ಇದರಲ್ಲಿ ನನ್ನ ತಪ್ಪಿಲ್ಲ. ಹಾಸ್ಯವನ್ನು ಹಾಸ್ಯವಾಗಿ ತೆಗೆದುಕೊಳ್ಳಿ ಎಂದು ವಿನಂತಿಸುತ್ತೇನೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿಕೊಳ್ಳುತ್ತೇನೆ. ಯಶ್ ಫ್ಯಾನ್ಸ್ ಕಡೆಯಿಂದ ನನಗೆ ಹಾಗೂ ನನ್ನ ಕುಟುಂಬದವರಿಗೆ ಕೆಟ್ಟ ರೀತಿಯಲ್ಲಿ ಎಸ್‌ಎಂಎಸ್‌ ಹಾಗೂ ಜೀವ ಬೆದರಿಕೆಗಳು ಬರುತ್ತಿವೆ. ಖಂಡಿತವಾಗಿಯು ಯಶ್ ಸಹ ಅವರ ಅಭಿಮಾನಿಗಳಿಂದ ಇಂಥ ನಡುವಳಿಕೆಗಳನ್ನು ಮೆಚ್ಚುವುದಿಲ್ಲ” ಎಂದು ಸುದರ್ಶನ್ ಫೇಸ್‌ಬುಕ್ ಪೋಸ್ಟ್ ಹಾಕಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top