fbpx
ಸಮಾಚಾರ

‘ರಾಧಾ ರಮಣ’ ಖ್ಯಾತಿಯ ದೀಪಿಕಾಗೆ ಕೂಡಿ ಬಂತು ಕಂಕಣಭಾಗ್ಯ: ತೆಲುಗು ಸ್ಟಾರ್ ನಟನ ಜೊತೆ ಮದುವೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿ ಈಗ ಮುಗಿದಿದೆ. ಈಗ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದ ದೀಪಿಕಾ ಪಾತ್ರಧಾರಿಯ ಅನುಷಾ ಹೆಗ್ಡೆ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು ತೆಲುಗು ನಟನ ಜೊತೆ ಮದುವೆ ಮಾಡಿಕೊಳ್ಳಲಿದ್ದಾರೆ.

 

 

ಅನುಷಾ ತೆಲುಗು ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅನುಷಾ ‘ರಾಧಾ ರಮಣ’ ಧಾರಾವಾಹಿ ಮುಗಿದ ಮೇಲೆ ತೆಲುಗಿನ ‘ನಿನ್ನೆ ಪೆಳ್ಳಾಡಟ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಟನ ಜೊತೆ ಅನುಷಾ ಮದುವೆಯಾಗಲಿದ್ದಾರೆ.

ಇತ್ತೀಚೆಗೆ ತೆಲುಗಿನ ಖಾಸಗಿ ವಾಹಿನಿಯಲ್ಲಿ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಅವಾರ್ಡ್​ ಕಾರ್ಯಕ್ರಮದ ವೇದಿಕೆಯಲ್ಲೇ ಪ್ರತಾಪ್ ತನ್ನ ಪ್ರೀತಿಯ ಹುಡುಗಿ ಅನುಷಾ ಹೆಗಡೆಗೆ ಪ್ರಪೋಸ್ ಮಾಡಿ, ಉಂಗುರ ತೊಡಿಸುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಉಂಗುರ ಹಾಕುತ್ತಿದ್ದಂತೆ ‘ನಿನ್ನೆ ಪೆಳ್ಳಾಡಟ’ ಧಾರಾವಾಹಿ ತಂಡದವರು ಎದ್ದುನಿಂತು ಚಪ್ಪಾಳೆ ತಟ್ಟಿದ್ದರು.

 

 

ತೆಲುಗಿನ ಸೀರಿಯಲ್ ನಲ್ಲಿ ಒಟ್ಟಿಗೆ ನಟಿಸುತ್ತಿರುವ ಪ್ರತಾಪ್ ಸಿಂಗ್ ಶಾ ಮತ್ತು ಅನುಷಾ ಹೆಗ್ಡೆ ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರೂ ಒಟ್ಟಿಗೇ ಧಾರಾವಾಹಿಯಲ್ಲಿ ನಟಿಸುವಾಗ ಪ್ರೀತಿ ಮೊಳೆತಿತು ಎಂದು ಅನುಷಾ ಹೇಳಿಕೊಂಡಿದ್ದಾರೆ. ಅನುಷಾ ಹಾಗೂ ಪ್ರತಾಪ್ ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಧಾರಾವಾಹಿ ತಂಡದ ಜೊತೆ ಹಂಚಿಕೊಂಡಿರಲಿಲ್ಲ. ತಮ್ಮ ಪ್ರೀತಿ ವಿಷಯವನ್ನು ಇಬ್ಬರು ಗುಟ್ಟಾಗಿ ಇಟ್ಟಿದ್ದರು.

ಇಬ್ಬರ ಪ್ರೀತಿ ಇದೀಗ ಮದುವೆವರೆಗೂ ಬಂದು ತಲುಪಿದೆ. ಶೀಘ್ರದಲ್ಲೇ ಅನುಷಾ ಹಾಗೂ ಪ್ರತಾಪ್ ಅವರ ಎಂಗೇಜ್‍ಮೆಂಟ್ ನಡೆಯಲಿದ್ದು. ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top