fbpx
ಸಮಾಚಾರ

ನಿರ್ಮಾಪಕನ ಜೊತೆ ಜಗಳ: ತೆಲುಗು ಸಿನಿಮಾದಿಂದ ಹೊರಬಿದ್ದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಧ್ವನಿಯೆತ್ತಿದ ವಿಚಾರಗಳೇ ಹೆಚ್ಚು ರಾರಾಜಿಸುತ್ತಿದೆ. ಕೆಲ ದಿನಗಳ ಹಿಂದೆ ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ ಎಂದಿದ್ದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆನಂತರದ ದಿನಗಳಲ್ಲಿ ಎಲ್ಲಿಯೂ ಸುದ್ದಿಯಾಗದೆ ಎಂದಿನಂತೆ ತಮ್ಮ ಪರ ಭಾಷೆಯ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

 

 

ಇತ್ತೀಚೆಗೆ ಟಾಲಿವುಡ್ ನಿರ್ಮಾಪಕರ ಜೊತೆಗೆ ಸಂಭಾವನೆ ವಿಚಾರವಾಗಿ ಕಿರಿಕ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಟಾಲಿವುಡ್‌ನಲ್ಲಿ ಸಖತ್ ಬಿಝಿ ಇರುವ ರಶ್ಮಿಕಾ ತೆಲುಗಿನ ದಿಲ್ ರಾಜು ಬ್ಯಾನರ್‌ನ ಎರಡು ಸಿನಿಮಾಗಳಲ್ಲಿ ನಟಿಸಲು ಒಪ್ಪಿದ್ದರಂತೆ. ಆದರೆ ಕೊನೆಗೆ ಆಗಿದ್ದೇ ಬೇರೆ.

ತೆಲುಗಿನ ಖ್ಯಾತ ನಟ ನಾಗ ಚೈತನ್ಯ ಜೊತೆ ಮುಂದಿನ ಸಿನಿಮಾ ಮಾಡಲು ರಶ್ಮಿಕಾ ಒಪ್ಪಿಕೊಂಡಿದ್ದರು. ಮಾತುಕತೆ ಹೆಚ್ಚು ಕಡಿಮೆ ಅಂತಿಮ ಹಂತಕ್ಕೆ ಬಂದಿತ್ತು. ನಿರ್ಮಾಪ ದಿಲ್ ರಾಜು ಜತೆ ಸಂಭಾವನೆ ವಿಚಾರದಲ್ಲಿ ಸ್ವಲ್ಪ ಕಿರಿಕ್ ಆಗಿದೆ ಎನ್ನಲಾಗಿದೆ. ಮಾತುಕತೆ ಅಂತಿಮ ಹಂತದಲ್ಲಿದ್ದಾಗ ರಶ್ಮಿಕಾ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ನಿರ್ಮಾಪಕ ದಿಲ್ ರಾಜು ಇದಕ್ಕೆ ಒಪ್ಪದೇ ಇರುವುದರಿಂದ ರಶ್ಮಿಕಾ ಆ ಚಿತ್ರದಿಂದ ಹೊರ ಬಂದಿದ್ಧಾರೆ ಎನ್ನಲಾಗಿದೆ.

ಇನ್ನು ಸಂಭಾವನೆ ವಿಷಯದಲ್ಲಿ ಭಾರೀ ಬೇಡಿಕೆಯಿಟ್ಟಿರುವ ರಶ್ಮಿಕಾ ಮಂದಣ್ಣರನ್ನು ಕೈಬಿಟ್ಟು ಹೊಸ ನಟಿಯನ್ನು ಪರಿಚಯಿಸಲು ನಿರ್ಮಾಪಕ ದಿಲ್ ರಾಜು ಯೋಜನೆ ಹಾಕಿಕೊಂಡಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top