fbpx
ಸಮಾಚಾರ

ರೈಲ್ವೆ ಇಲಾಖೆಯಲ್ಲಿ 386 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿ ಹುಡುಕಾಟದಲ್ಲಿರುವವರಿಗೆ ರೈಲ್ವೆ ಇಲಾಖೆ ಬಂಪರ್ ಅವಕಾಶ ಒದಗಿಸಿದೆ. ಸೌತ್ ವೆಸ್ಟರ್ನ್​ ರೈಲ್ವೆಯಲ್ಲಿ 386 ಹುದ್ದೆಗಳು ಖಾಲಿಯಿದೆ. ಹಿರಿಯ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ನವೆಂಬರ್ 20, 2019ರೊಳಗೆ ಅರ್ಜಿ ಸಲ್ಲಿಸಬಹುದು.

 

 

 

ವಿದ್ಯಾರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಂದ 12ನೇ ತರಗತಿ, ಪದವಿ ಅಥವಾ ತತ್ಸಮಾನ ಅರ್ಹತೆ.

ವಯೋಮಿತಿ:
18 ರಿಂದ 42 ವರ್ಷ ವಯಸ್ಸು (ಮೀಸಲು ರಹಿತ) 18 ರಿಂದ 45 ವರ್ಷ (ಒಬಿಸಿ) 18 ರಿಂದ 47 ವರ್ಷ (ಎಸ್ ಸಿ/ ಎಸ್ಟಿ)

ನೇಮಕಾತಿ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಸಂದರ್ಶನ.

ಅರ್ಜಿ ಶುಲ್ಕ:
ಯಾವುದೇ ಶುಲ್ಕವಿಲ್ಲ

ಅರ್ಜಿಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ನೈರುತ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ http://www.rrchubli.in ಗೆ ಲಾಗಿನ್‌ ಆಗಿ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನೈರುತ್ಯ ರೈಲ್ವೆ ಇಲಾಖೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ನೋಡಬಹುದಾಗಿದೆ. ಈ ಕೆಳಗೆ ಅಧಿಸೂಚನೆ ಲಿಂಕ್‌ ನೀಡಲಾಗಿದೆ. ಅಧಿಸೂಚನೆ ಲಿಂಕ್‌: https://bit.ly/35SoQJi

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top