fbpx
ಸಮಾಚಾರ

ಬಾಲಿವುಡ್ ಭಾಯಿಜಾನ್ ಕನ್ನಡ ಪ್ರೇಮಕ್ಕೆ ಮನಸೋತ ಕನ್ನಡಿಗರು!

ಸಲ್ಮಾನ್‌ ಖಾನ್‌, ಸುದೀಪ್‌ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ದಬಾಂಗ್‌ 3’ ಟ್ರೇಲರ್‌ ಲಾಂಚ್‌ ಆಗಿದೆ. ಟ್ರೇಲರ್‌ನಲ್ಲಿ ಕೆಲವೇ ಶಾಟ್‌ಗಳಲ್ಲಿ ಕಾಣಿಸಿಕೊಂಡರೂ ಸುದೀಪ್‌ ತಾವು ಅಭಿನಯ ಚಕ್ರವರ್ತಿ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ. ಸ್ಟೈಲಿಷ್‌ ವಿಲನ್‌ ಆಗಿ ಅವರು ಕಾಣಿಸಿಕೊಂಡಿದ್ದಾರೆ.

 

 

‘ದಬಾಂಗ್​ 3’ನಲ್ಲಿ ಚುಲ್ಬುಲ್​ ಪಾಂಡೆಯಾಗಿ ಸಲ್ಮಾನ್​ ಖಾನ್​ ಹಾಗೂ ಬಲ್ಲಿ ಸಿಂಗ್​ ಆಗಿ ಸುದೀಪ್​ ಕಾಣಿಸಿಕೊಳ್ಳುತ್ತಿದ್ದಾರೆ. ಬಲ್ಲಿ​ ಇಷ್ಟ ಪಟ್ಟ ಹುಡುಗಿಯನ್ನೇ ಚುಲ್ಬುಲ್​ ಪಾಂಡೆ​ ಪ್ರೀತಿಸುತ್ತಾನೆ. ಈ ಕಾರಣಕ್ಕೆ ಇಬ್ಬರ ನಡುವೆ ದ್ವೇಷ ಮೂಡುತ್ತದೆ. ಹೀಗಾಗಿ ಇಬ್ಬರೂ ಕಿತ್ತಾಡುತ್ತಾರೆ. ಸಲ್ಮಾನ್​ ಖಾನ್​-ಸುದೀಪ್​ ನಡುವೆ ಏರ್ಪಡುವ ಜಿದ್ದಾಜಿದ್ದಿ ನೋಡುಗರಿಗೆ ಸಖತ್​ ಕಿಕ್​ ಕೊಡಲಿದೆ ಎಂಬುದಕ್ಕೆ ಟ್ರೈಲರ್​ ಸಾಕ್ಷ್ಯ ನೀಡಿದೆ.

ಸದ್ಯ ರಿಲೀಸ್ ಆಗಿರುವ ಕನ್ನಡ ವರ್ಷನ್ ಟ್ರೈಲರ್ ಗೆ ಸ್ವತ ಸಲ್ಮಾನ್ ಖಾನ್ ಧ್ವನಿ ನೀಡಿದ್ದಾರೆ. ಸಲ್ಲು ಕನ್ನಡದಲ್ಲಿ ಮಾತನಾಡಿದ್ದನ್ನು ನೋಡಿ ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ. ಸಲ್ಮಾನ್ ಸ್ಪಷ್ಟವಾಗಿ ಕನ್ನಡ ಮಾತನಾಡಿದ್ದರು ವಾಕ್ಯವನ್ನು ನಿಲ್ಲಿಸಿ ನಿಲ್ಲಿಸಿ ಮಾತನಾಡಿದ್ದಾರೆ. ಇದರಿಂದ ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಾಲಿವುಡ್ ನ ಸ್ಟಾರ್ ನೊಬ್ಬ ಕನ್ನಡದಲ್ಲಿ ಡಬ್ ಮಾಡಿರುವುದು ನಿಜಕ್ಕು ಸಂತಸ ತರುವಂತ ವಿಚಾರ ಎನ್ನುವುದು ಅನೇಕರ ಅಭಿಪ್ರಾಯ.

 

 

ಸಿನಿಮಾ ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ಮೂಡಿಬರುತ್ತಿದೆ. ಆದರೆ ತೆಲುಗು ಮತ್ತು ತಮಿಳು ಅವತರಣಿಕೆಯಲ್ಲಿ ಡಬ್ ಮಾಡದ ಸಲ್ಲು ಕನ್ನಡದಲ್ಲಿ ಡಬ್ ಮಾಡಲು ಆಯ್ಕೆ ಮಾಡಿಕೊಂಡು ಪ್ರಯತ್ನ ಪಟ್ಟಿರುವುದು ನಿಜಕ್ಕೂ ಪ್ರಶಂಸನೀಯ. ಕನ್ನಡಿಗರಾಗಿ ಸಲ್ಮಾನ್ ಖಾನ್ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವಿಶೇಷ ಅಂದ್ರೆ ಸಲ್ಮಾನ್ ಖಾನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಕನ್ನಡ ವರ್ಷನ್ ಟ್ರೈಲರ್ ಲಾಂಚ್ ಮಾಡಿದ್ದಾರೆ. “ದಯವಿಟ್ಟು, ದಬಾಂಗ್3 ಕನ್ನಡ ಟ್ರೈಲರ್ ನೋಡುವದಕ್ಕಾಗಿ ನಿಮ್ಮ ಅಮೂಲ್ಯ ಸಮಯದಲ್ಲಿ 3 ನಿಮಿಷಗಳನ್ನು ನಮಗಾಗಿ ಕೊಡಬಹುದಾ?” ಎಂದು ಟ್ವೀಟ್ ಮಾಡಿದ್ದು ಕನ್ನಡಿಗರ ಮನಗೆದ್ದಿದ್ದಾರೆ.. ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top