fbpx
ಸಮಾಚಾರ

ಕನ್ನಡ ಚಿತ್ರದಲ್ಲಿ ಅಭಿನಯಿಸುವ ಆಸೆ ಬಿಚ್ಚಿಟ್ಟ ಸಲ್ಮಾನ್ ಖಾನ್

ಬಾಲಿವುಡ್‍ ಭಾಯಿಜಾನ್ ಸಲ್ಮಾನ್ ಸದ್ಯ ದಬಾಂಗ್ 3 ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರೋ ಈ ಚಿತ್ರ ಬಿಡುಗಡೆಗೆ ತಯಾರಾಗಿದೆ. ನೆನ್ನೆಯಷ್ಟೇ ಈ ಸಿನಿಮಾದ ಟ್ರೇಲರ್ ಕೂಡಾ ಬಿಡುಗಡೆಯಾಗಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಟ್ರೈಲರ್ ಲಾಂಚ್ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಸಲ್ಮಾನ್ ಖಾನ್ ಕನ್ನಡದಲ್ಲಿಯೇ ಮಾತಾಡೋ ಮೂಲಕ ಕನ್ನಡಿಗರೆಲ್ಲರ ಮನ ಗೆದ್ದಿದ್ದಾರೆ. ಇದೇ ವೇಳೆ ಕನ್ನಡ ಸಿನಿಮಾದಲ್ಲಿ ನಟಿಸಲೂ ಉತ್ಸುಕರಾಗಿರೋದರ ಬಗ್ಗೆಯೂ ಮಾತಾಡಿದ್ದಾರೆ.

 

 

ಟ್ರೇಲರ್‌ ಬಿಡುಗಡೆ ಸಮಾರಂಭ ವೇಳೆ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ನಿರ್ದೇಶಕ ಅನೂಪ್‌ ಭಂಡಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್‌ ಖಾನ್‌, ‘ಒಳ್ಳೆಯ ಕಥೆಗಳು ಸಿಕ್ಕಿದರೆ ಕನ್ನಡದಲ್ಲಿಯೂ ನಟಿಸಲು ಸಿದ್ಧ. ಈಗಾಗಲೇ, ಸುದೀಪ್‌ ಜೊತೆಗೆ ನಟಿಸಿದ್ದೇನೆ. ಕನ್ನಡದ ನಿರ್ದೇಶಕರೊಟ್ಟಿಗೂ ನಟಿಸುವ ಆಸೆಯೂ ಇದೆ. ಶೀಘ್ರವೇ, ಬೆಂಗಳೂರಿಗೆ ಬಂದು ಅಭಿಮಾನಿಗಳನ್ನು ಭೇಟಿಯಾಗಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದರು.

ಇನ್ನು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಸುದೀಪ್ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್ “ಕಿಚ್ಚ ಸುದೀಪ್‌‌ ನನ್ನ ತಮ್ಮನ ರೀತಿ. ಮೊದಲು ಸೋಹಿಲ್ ಗೆ ಸುದೀಪ್ ಪರಿಚಯವಾಗಿದ್ದರು. ಈಗ ನನಗೂ ಕ್ಲೋಸ್ ಆಗಿಬಿಟ್ಟಿದ್ದಾರೆ. ಸುದೀಪ್ ಒಳ್ಳೆ ಮನುಷ್ಯ, ಹಾರ್ಡ್ ವರ್ಕರ್, ಕ್ಲಿಯರ್ ಹಾರ್ಟ್ ಮನುಷ್ಯ. ದಬಾಂಗ್3 ಸಿನಿಮಾದಲ್ಲಿ ಸುದೀಪ್ ತುಂಬಾ ಅದ್ಬುತವಾಗಿ ನಟಿಸಿದ್ದಾರೆ. ಸೌತ್ ನಲ್ಲಿ‌ಸುದೀಪ್ ಸೂಪರ್ ಸ್ಟಾರ್ ಅದಕ್ಕಾಗಿ ಅವರನ್ನೇ ಆಯ್ಕೆ ಮಾಡಿಕೊಂಡೆವು” ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top