fbpx
ಸಮಾಚಾರ

ಒಡೆಯನ ಶೂಟಿಂಗ್ ಮುಕ್ತಾಯ

ದರ್ಶನ್ ನಟನೆಯ ಒಡೆಯ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದು, ಸ್ವಿಟ್ಜರ್ ಲೆಂಡ್ ನಲ್ಲಿ ಶೂಟಿಂಗ್ ಮುಗಿಸಿರುವ ಫೋಟೋವನ್ನು ರಿಲೀಸ್ ಮಾಡಿದ್ದಾರೆ. ನಟ ದರ್ಶನ್ ಮತ್ತು ಚಿತ್ರತಂಡ ಶೂಟಿಂಗ್ ಮುಗಿಸಿ ಸಂಭ್ರಮಾಚರಣೆ ಮಾಡಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ.

‘ಒಡೆಯ’ ಚಿತ್ರವು ಸಹೋದರರ ಕಥಾವಸ್ತುವನ್ನು ಒಳಗೊಂಡಿದ್ದು ನಾಯಕ ದರ್ಶನ್’ಗೆ ಚಿತ್ರದಲ್ಲಿ ನಾಲ್ವರು ತಮ್ಮಂದಿರುವ ಇರಲಿದ್ದಾರೆ.ಈಗ ಆ ಪಾತ್ರಗಳಿಗೆ ಕಲಾವಿದರ ಆಯ್ಕೆ ಅಂತಿಮವಾಗಿದ್ದು ಯಶಸ್, ಪಂಕಜ್ ನಾರಾಯಣ್, ನಿರಂಜನ್ ಹಾಗೂ ಸಮರ್ಥ್ ದರ್ಶನ್ ತಮ್ಮಂದಿರಾಗಿ ಕಾಣಿಸಿಕೊಳ್ಳಲಿದ್ದಾರೆ.

ಉಳಿದಂತೆ ದೇವರಾಜ್, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾಶೆಣೈ, ಶರತ್ ಲೋಹಿತಾಶ್ವ, ಅವಿನಾಶ್, ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ. ಇನ್ನು ‘ಒಡೆಯ’ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದು ಇನ್ನು ‘ಒಡೆಯ’ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top