fbpx
ಸಮಾಚಾರ

ಬಿಗ್ ಬಾಸ್ ಶೋನಿಂದ ರವಿ ಬೆಳಗೆರೆಗೆ ಸಿಕ್ಕ ಸಂಭಾವನೆ ಇಷ್ಟೇನಾ?

ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಾಲ ಇದ್ದು ಬಂದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಪಡೆದುಕೊಂಡ ಸಂಭಾವನೆ ಎಷ್ಟು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆಯುತ್ತಿದೆ. ಮೂಲಗಳ ಪ್ರಕಾರ ಒಂದು ರೂಪಾಯಿಯನ್ನು ಪಡೆದುಕೊಳ್ಳದೇ ರವಿ ಬೆಳಗೆರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಅವರ ಆಪ್ತವಲಯದ ಮೂಲಗಳ ಪ್ರಕಾರ ಬಿಗ್ ಬಾಸ್ ಮನೆಗೆ ಹೋಗಲು ಒಂದು ರುಪಾಯಿ ಹಣವನ್ನು ನಾನು ಕೇಳಿಲ್ಲ, ಅವರಿಂದ ಪಡೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

 

 

ಆದರೆ ಇನ್ನೊಂದು ಮೂಲದ ಪ್ರಕಾರ, ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲು ಬಿಗ್ ಬಾಸ್ ಆಯೋಜಕರು ರವಿ ಬೆಳಗೆರೆ ಅವರಿಗೆ ನೀಡದ ಆಫರ್ 7 ಲಕ್ಷ ರೂ. ಪ್ರತಿ ದಿನ ಒಂದು ಲಕ್ಷದಂತೆ ಬಿಗ್ ಬಾಸ್​ ಮನೆಯಲ್ಲಿ ಭಾಗವಹಿಸಲು ರವಿ ಬೆಳಗೆರೆ ಅವರು ಒಪ್ಪಿಕೊಂಡಿದ್ದರು ಎಂದು ಹೇಳಲಾಗಿದೆ. ವಿಚಾರಗಳು ಏನೇ ಇದ್ದರೂ ಇಲ್ಲಿಯವರೆಗೆ ಬೆಳಗೆರೆ ಯಾವುದೇ ಗೌರವ ಧನ ಪಡೆದುಕೊಂಡಿಲ್ಲ.

ಈ ವಿಚಾರಗಳು ಏನೇ ಇರಲಿ ತಮ್ಮದೇ ಶೈಲಿಯ ಮಾತುಕತೆ, ಅನುಭವ, ಜ್ಞಾನ ಭಂಡಾರವನ್ನು ತೆರೆದಿಟ್ಟಿದ್ದ ಬೆಳಗೆರೆಯವರು ಮೊದಲ ದಿನದಿಂದಲೇ ಪ್ರೇಕ್ಷಕರ ಮನಗೆದ್ದಿದ್ದರು. ಅದರಲ್ಲೂ ಬಿಗ್ ಬಾಸ್ ಸ್ಪರ್ಧಿಗಳೇ ರವಿ ಅವರ ಸ್ಪೂರ್ತಿದಾಯಕ ಮಾತುಗಳು ಫಿದಾ ಆಗಿದ್ದರು. ಕಳೆದ ಒಂದು ವಾರದಲ್ಲಿ ಬಿಬಿ ಮನೆ ಮಂದಿಯ ಕಷ್ಟ ಸುಖಗಳನ್ನು ಆಲಿಸಿದ್ದ ರವಿ ಬೆಳಗೆರೆ ಹೋಗುವ ಮುನ್ನ ಕೂಡ ಸ್ಪರ್ಧಿಗಳಿಗೆ ಹೊಸ ಸ್ಪೂರ್ತಿ ತುಂಬುವ ಪ್ರಯತ್ನ ಮಾಡಿದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ರವಿ ಇಲ್ಲದಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top