fbpx
ಸಮಾಚಾರ

“ಪ್ರಕಾಶ್ ರೈ ನಿಜವಾದ ಟೈಗರ್, ನಾನೂ ಪ್ರಕಾಶ್ ರೈ ಆಗುತ್ತೇನೆ” ನಟಿ ಸೋನು ಗೌಡ.

ಸಮಾಜದಲ್ಲಿ ನಡೆಯುತ್ತಿರೋ ವಿದ್ಯಮಾನಗಳ ಬಗ್ಗೆ ಮಾತಾಡುತ್ತಲೇ ನೇರಾ ನೇರ ಅಭಿಪ್ರಾಯ ಮಂಡಿಸೋ ಮೂಲಕ ಚರ್ಚೆ ಹುಟ್ಟು ಹಾಕಿ ವಿವಾದಕ್ಕೂ ಕಾರಣವಾಗಿರುವವರು ಬಹುಭಾಷಾ ನಟ ಪ್ರಕಾಶ್ ರೈ. ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಬಿಢೆಯಿಂದ ಧ್ವನಿಯೆತ್ತುತ್ತಾ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವ ನಟ ಪ್ರಕಾಶ್ ರೈ, ಧರ್ಮಾಧಾರಿತ ರಾಜಕಾರಣ ಮತ್ತು ಆ ಭೂಮಿಕೆಯಲ್ಲಿ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳ ವಿರುದ್ಧ ಟೀಕಿಸುತ್ತಲೇ ಬಂದಿದ್ದಾರೆ.

 

 

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರೋ ಇವರನ್ನು ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾನೇ ಫಾಲೋ ಮಾಡ್ತಾರೆ. ಸದ್ಯ ಇದೀಗ ಸ್ಯಾಂಡಲ್​​​​ವುಡ್​ ನಟಿ ಸೋನುಗೌಡ ಕೂಡ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಪ್ರಕಾಶ್ ರೈ ಅವರನ್ನು ಹಾಡಿ ಹೊಗಳಿದ್ದಾರೆ.

“ಸಿನಿಮಾದಲ್ಲಿ ನಟ ನಾನು ಹುಲಿ, ನಾನು ಸಿಂಹ ಎಂದು ಡೈಲಾಗ್‌ ಹೇಳಿದ್ದನ್ನು ಕೇಳಿದ್ದೇನೆ. ಆದರೆ ನಾನು ಈ ನಟನನ್ನು ಭೇಟಿಯಾದಾಗ ಅವರ ಬೆಂಕಿಯ ಕಣ್ಣು ಮತ್ತು ಶಾರ್ಪ್ ಧ್ವನಿ ನೋಡಿದಾದ ಅವರಿಗೆ ಅವರೇ ಟೈಗರ್ ಎನಿಸಿತು. ಕೆಲವು ಅವಧಿಯಲ್ಲಿ ಅವರು ನನಗೆ ಸ್ಫೂರ್ತಿ ನೀಡಿದ್ದಾರೆ. ಅವರ ಮಾತು, ಆಲೋಚನೆ, ಜೀವನ, ಕೆಲಸದ ಬಗೆಗಿನ ಅವರ ನೈತಿಕತೆ ಕಂಡು ಮಂತ್ರಮುಗ್ಧವಾಗಿದ್ದೆ. ನನಗೂ ನಟಿಯಾಗಿ ಅವರಂತೆ ಆಗುವ ಆಸೆ. ಇವರಂಥ ಪ್ರೆಸೆಂಟೇಶಮ್, ಡೆಡಿಕೇಶನ್ ಇರಬೇಕು. ಪ್ರತಿಯೊಬ್ಬರು ಯಶಸ್ಸು ಸಾಧಿಸಲು ತಮ್ಮದೇ ಆದ ದಾರಿ ಮಾಡಿಕೊಳ್ಳಬೇಕು” ಎಂದು ನಟಿ ಸೋನುಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

 

ಯಡಿಯೂರಪ್ಪ ಅವರನ್ನು ವಿರೋಧಿಸಿದ್ದ ಸೋನು ಗೌಡ:
ವಾಹನ ಚಾಲಕರಿಗೆ ಭಾರೀ ದಂಡ ವಿಧಿಸುತ್ತಿರುವ ಸರ್ಕಾರದ ಕ್ರಮ ಕುರಿತಂತೆ ಸೋನು ಗೌಡ ಟೀಕಿಸಿದ್ದರು. “ದಂಡ ವಿಧಿಸುವ ಮುನ್ನ ನೀವು ಒಳ್ಳೆಯ ರಸ್ತೆಗಳನ್ನು ಕೊಟ್ಟಿದ್ದೀರಾ ಎಂದು ನೋಡಿಕೊಳ್ಳಿ. ಜನಸಾಮಾನ್ಯರು ಕಷ್ಟಪಟ್ಟು ದುಡಿದ ಹಣವನ್ನು ತೆಗೆದುಕೊಂಡು ಅವರನ್ನು ಕಷ್ಟಕ್ಕೆ ತಳ್ಳಬೇಡಿ. ರಸ್ತೆಗಳಲ್ಲಿ ಕಾಣಸಿಗುವ ಪ್ರತಿಯೊಂದು ಗುಂಡಿಗಳಿಗೆ ಸರ್ಕಾರಕ್ಕೆ ನಾವೆಷ್ಟು ಫೈನ್ ಹಾಕಬೇಕು? ಟ್ರಾಫಿಕ್ ರೂಲ್ಸ್ ಮಾಡುವ ಮುನ್ನ ಒಳ್ಳೆಯ ರಸ್ತೆಗಳನ್ನು ನೀಡಿ” ಈನ್ದು ಸೋನುಗೌಡ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top