fbpx
ಸಮಾಚಾರ

ಬಾಲಿವುಡ್​​ನಲ್ಲಿ ಮಹಾಭಾರತ ಫಿಕ್ಸ್: ದ್ರೌಪದಿ ಪಾತ್ರಕ್ಕೆ ಬೆಂಗಳೂರು ಹುಡುಗಿ ಆಯ್ಕೆ!

ಬಾಲಿವುಡ್​ನಲ್ಲಿ ಮಹಾಭಾರತ ಕುರಿತಾದ ಸಿನಿಮಾಗಳ ಬಗ್ಗೆ ಆಗಾಗ್ಗೆ ಕೆಲ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಬಾಲಿವುಡ್​ನಲ್ಲಿ ಮಧು ಮಂಟೆನಾ ನಿರ್ಮಾಣ ಮಾಡುತ್ತಿರುವ ಬಿಗ್​ ಬಜೆಟ್​ ಚಿತ್ರ ಮಹಾಭಾರತದಲ್ಲಿ ದಿಪೀಕಾ ನಟಿಸುತ್ತಿರುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಸಿನಿಮಾ ವಿಮರ್ಶಕ ತರಣ್​ ಆದರ್ಶ್​ ತಮ್ಮ ಟ್ವೀಟ್​ ಮೂಲಕ ಖಚಿತಪಡಿಸಿದ್ದಾರೆ.

 

 

ಬಾಲಿವುಡ್ ನ ಮಹಾಭಾರತದಲ್ಲಿ ದ್ರೌಪದಿ ಪಾತ್ರದಲ್ಲಿ ಬೆಂಗಳೂರಿನ ಹುಡುಗಿ ದೀಪಿಕಾ ಪಡುಕೋಣೆ ರೆಡಿಯಾಗಿದ್ದಾರೆ. ದ್ರೌಪದಿಯನ್ನು ಗಂಡಸರ ದೃಷ್ಟಿಯಲ್ಲಿ ಒಂದು ಕಥೆ ಮಾಡಿದರೆ, ಹೆಂಗಸರ ದೃಷ್ಟಿಯಲ್ಲಿ ಬೇರೆ ಕಥೆ ಮಾಡಲಾಗಿದೆ. ಆಕೆಯ ಮತ್ತೊಂದು ರೂಪವನ್ನು ಜನರಿಗೆ ತೋರಿಸುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಹಲವಾರು ಭಾಗಗಳಲ್ಲಿ ಇದನ್ನು ತೆರೆಗೆ ತರಲಾಗುತ್ತಿದ್ದು ಮೊದಲ ಭಾಗ 2021ರ ದೀಪಾವಳಿಗೆ ತೆರೆಕಾಣಲಿದೆ ಎಂದಿದೆ ಚಿತ್ರತಂಡ.

ಈ ಬಗ್ಗೆ ಮಾತನಾಡಿರುವ ದೀಪಿಕಾ, “ದ್ರೌಪದಿ ಪಾತ್ರ ಪೋಷಿಸುತ್ತಿರುವುದಕ್ಕೆ ತುಂಬಾ ಥ್ರಿಲ್ ಆಗಿದ್ದೇನೆ. ಜೊತೆಗೆ ಹೆಮ್ಮೆ ಅನ್ನಿಸುತ್ತಿದೆ. ಇದು ನನ್ನ ಜೀವಮಾನದ ಪಾತ್ರವಾಗಲಿದೆ. ಇದು ಪೌರಣಿಕ ಪಾತ್ರವಾಗಿರಲಿದ್ದು, ನಮ್ಮ ಸಂಸ್ಕೃತಿಯ ಪ್ರಭಾವ ಹೆಚ್ಚಿದೆ, ಈ ಪಾತ್ರ ಹೆಚ್ಚು ಖುಷಿ ನೀಡಲಿದೆ ” ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top