fbpx
ಸಮಾಚಾರ

ಕೆಜಿಎಫ್, ಪೈಲ್ವಾನ್ ಮತ್ತು ಕುರುಕ್ಷೇತ್ರ ದಾಖಲೆಯನ್ನು ಕೆಲವೇ ಗಂಟೆಗಳಲ್ಲಿ ಉಡೀಸ್ ಮಾಡಿದ ಪೊಗರು!

‘ಪೊಗರು’ ಸಿನಿಮಾದ ಟ್ರೇಲರ್ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು ಯೂ ಟ್ಯೂಬ್ ನಲ್ಲಿ ಈ ಟ್ರೇಲರ್ ಧೂಳೆಬ್ಬಿಸುತ್ತಿದೆ. ಧ್ರುವ ಸರ್ಜಾ ಪವರ್ ಅನ್ನು ಈ ಟ್ರೇಲರ್ ಪ್ರೂ ಮಾಡಿದೆ. ಸದ್ಯ ಡೈಲಾಗ್ ಟ್ರೈಲರ್ ಯೂಟ್ಯೂಬ್ ನಲ್ಲಿ ಸಖತ್ ಸದ್ದು ಮಾಡ್ತಿದ್ದು ನಂ.1 ಟ್ರೆಂಡಿಂಗ್ ಸ್ಥಾನದಲ್ಲಿದೆ.

 

 

ಪೊಗರು ಡೈಲಾಗ್ ಟ್ರೈಲರ್ ಕೆಜಿಎಫ್, ಪೈಲ್ವಾನ್ ಮತ್ತು ಕುರುಕ್ಷೇತ್ರ ಚಿತ್ರಗಳ ಟ್ರೈಲರ್ ರೆಕಾರ್ಡ್ ಅನ್ನು ಕೆಲವೇ ಗಂಟೆಗಳಲ್ಲಿ ಬ್ರೇಕ್ ಮಾಡಿದೆ. 51 ನಿಮಿಷದಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಈ ಹಿಂದೆ ಯಜಮಾನ ಚಿತ್ರದ ಟ್ರೈಲರ್ ಒಂದು ಗಂಟೆಯಲ್ಲಿ ಮಿಲಿಯನ್ ವೀಕ್ಷಣೆ ಕಂಡಿದ್ದೆ ದಾಖಲೆಯಾಗಿತ್ತು. ಕೆಜಿಎಫ್, ಪೈಲ್ವಾನ್ ಮತ್ತು ಕುರುಕ್ಷೇತ್ರ ಸಿನಿಮಾ ಟ್ರೈಲರ್ ಗಳು ಕೂಡ ಈ ದಾಖಲೆಯನ್ನು ಮುರಿಯಲು ಫೇಲ್ ಆಗಿದ್ದವು.. ಆದರೆ ಈಗ ಪೊಗರು ಸಿನಿಮಾ ಟ್ರೈಲರ್ ಈ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದೆ.

ಇನ್ನು ಟ್ರೇಲರ್ ನಲ್ಲಿ ಧ್ರುವ ಸರ್ಜಾ ಅವರು ಸಖತ್ ಮಾಸ್ ಡೈಲಾಗ್ ಗಳನ್ನು ಹೊಡೆದಿದ್ದಾರೆ. ಶುರುವಿನಲ್ಲೇ ‘ಅಡ್ರೆಸ್ ತಿಳ್ಕೊಂಡು ಸರ್ವೀಸ್ ಮಾಡೋಕೆ ಕೊರಿಯರ್ ಹುಡ್ಗ ಅನ್ಕೊಂಡೇನೋ, ಫೈಟರ್’ ಎಂಬ ಡೈಲಾಗ್ ಮೆಚ್ಚುಗೆಗೆ ಕಾರಣವಾಗಿದೆ. ಅಲ್ಲದೇ ಟ್ರೇಲರ್ ನಲ್ಲಿ ಧ್ರುವ ಸರ್ಜಾ ಅವರ ಕಟ್ಟುಮಸ್ತಾಗಿರುವ ದೇಹ, ಖಡಕ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top