fbpx
ಸಮಾಚಾರ

“ನನ್ನ ಸರ್ಕಾರವನ್ನು ಅವರು ಕೆಡೆವಿದರು ಎಂದು ಬಿಜೆಪಿ ಸರ್ಕಾರವನ್ನು ನಾನು ಬೀಳಿಸುವುದಿಲ್ಲ” ಕುಮಾರಸ್ವಾಮಿ ಹೇಳಿಕೆ

ಬಿಜೆಪಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದೆ. ಹಾಗಂತ ನಾನು ಬಿಜೆಪಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲ್ಲ. ನಾನು ಅವರಂತೆಯೇ ಸರ್ಕಾರ ಬೀಳಿಸಲು ಮುಂದಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಇಂದು ಚಿಕ್ಕೋಡಿ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ ವಿರುದ್ಧ ನಾನು ರಿವೇಂಜ್ ತೆಗೆದುಕೊಳ್ಳಲ್ಲ. ನನ್ನ ಮೈತ್ರಿ ಸರ್ಕಾರವನ್ನು ಅವರು ಕೆಡೆವಿದರು ಎಂದು ಬಿಜೆಪಿ ಸರ್ಕಾರವನ್ನು ನಾನು ಬೀಳಿಸುವುದಿಲ್ಲ ನಾನು ಅವರಂತೆಯೇ ಸರ್ಕಾರ ಬೀಳಿಸಲು ಮುಂದಾದರೆ ಜನರ ಕಷ್ಟ ಕೇಳುವವರಾರು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಪ್ರವಾಹದಿಂದಾಗಿ ರಾಜ್ಯ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಹೀಗಾಗಿ ಮೊದಲು ನೆರೆಯಿಂದಾಗಿ ಬೆಳೆ ನಷ್ಟ ಆಗಿರುವ ರೈತರಿಗೆ ಆರ್ಥಿಕ ನೆರವು ಒದಗಿಸಲು ಸರ್ಕಾರದ ಗಮನ ಸೆಳೆಯುತ್ತೇನೆ, ಸಲಹೆ ಕೊಡುತ್ತೇನೆ. ಒಂದು ವೇಳೆ ಕೆಲಸ ಆಗಲಿಲ್ಲ ಎಂದರೆ ಹೋರಾಟ ಮಾಡುತ್ತೇನೆ ಎಂದು ಹೇಳಿದರು. ನಾನು ಬಂದಿರುವುದು ಯಾವುದೇ ಪಕ್ಷದ ಸಂಘಟನೆಯ ಕಾರ್ಯಕ್ರಮಕ್ಕಲ್ಲ. ಕಾರ್ಯಕರ್ತರು ಅವರವರ ಮಟ್ಟದಲ್ಲಿ ಚರ್ಚೆ ಮಾಡಿರಬಹುದು ಇಲ್ಲಿಯವರೆಗೂ ನಾನು ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿಲ್ಲ ಎಂದು ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top