fbpx
ಸಮಾಚಾರ

ಮಲಯಾಳಂ ಸಂದರ್ಶನದಲ್ಲಿ ಕನ್ನಡ ಹಾಡನ್ನು ಹಾಡಿದ ನಟಿ ನಿತ್ಯ ಮೆನನ್.

ಮಲೆಯಾಳಂ ಮೂಲವಾದರೂ ಕನ್ನಡದ ಹುಡುಗಿ ನಿತ್ಯಾ ಮೆನನ್. ಆಕೆ ಕನ್ನಡದಲ್ಲಿ ನಟಿಸಿರೋದು ಕೆಲವೇ ಕೆಲ ಚಿತ್ರಗಳಲ್ಲಾದರೂ ಆ ಪಾತ್ರಗಳನ್ನು ಕನ್ನಡದ ಪ್ರೇಕ್ಷಕರು ಮರೆಯುವಂತಿಲ್ಲ. ಸವಾಲಿನ ಪಾತ್ರಗಳನ್ನೇ ಸದಾ ಆರಿಸಿಕೊಳ್ಳುವ ನಿತ್ಯಾ ಪ್ರತಿಭಾವಂತ ನಟಿ. ಯಾವ ಥರದ ಪಾತ್ರಗಳಿಗಾದರೂ ಹೊಂದಿಕೊಂಡು ನಟಿಸೋ ತಾಕತ್ತಿರೋ ನಟಿಸಿದ ಚಿತ್ರಗಳಲ್ಲೆಲ್ಲವೂ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

 

 

ಎಷ್ಟೇ ಬೆಳೆದರು, ಯಾವುದೇ ಭಾಷೆಯ ಸಿನಿಮಾ ಮಾಡಿದರೂ, ನಿತ್ಯಾ ಕನ್ನಡವನ್ನು ಎಂದಿಗೂ ಮರೆತಿಲ್ಲ. ಆಗಾಗ ಆಕೆ ತನ್ನ ಕನ್ನಡ ಪ್ರೇಮವನ್ನು ತೋರಿಸುತ್ತಿರಿತ್ತಾರೆ. ಇದೀಗ ನಿತ್ಯಾ ಮೆನನ್ ಮಲೆಯಾಳಂ ಸಂದರ್ಶನದಲ್ಲಿ ಕನ್ನಡ ಹಾಡನ್ನು ಹಾಡುವ ಮೂಲಕ ಗಮನ ಸೆಳೆದಿದ್ದಾರೆ.

ಖ್ಯಾತ ನಿರೂಪಕಿ ರೇಖಾ ನಡೆಸಿಕೊಡುವ ಸಂದರ್ಶನ ಕಾರ್ಯಕ್ರಮದಲ್ಲಿ ನಿತ್ಯ ಮೆನನ್ ಭಾಗವಹಿಸಿದ್ದರು. ನಿರೂಪಕಿಯ ಕೋರಿಕೆಯಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲೀಷ್ ಹಾಡುಗಳನ್ನು ನಿತ್ಯಾ ಸುಮಧುರವಾಗಿ ಹಾಡಿದರು. ಹಾಡು ಮುಗಿಯುತ್ತಿದ್ದಂತೆ ನಿರೂಪಕಿ ಚಪ್ಪಾಳೆ ಸಹ ಹೊಡೆದರು. ಆದರೆ, ನಿತ್ಯಾ ಮೆನನ್ ‘ನಾನಿನ್ನೂ ಕನ್ನಡ ಹಾಡನ್ನು ಹಾಡಿಲ್ಲ. ಕನ್ನಡದಲ್ಲೂ ಒಂದು ಗೀತೆಯನ್ನು ಹಾಡಬೇಕು ಎಂದು ನಿರೂಪಕಿಗೆ ತಿಳಿಸಿದರು.

ಅದರಂತೆ ‘ಮಿಲನ’ ಚಿತ್ರದ ‘ನಿನ್ನಿಂದಲೇ.. ನಿನ್ನಿಂದಲೇ..’ ಹಾಡನ್ನು ಇಂಪಾಗಿ ಹಾಡಿದ ನಿತ್ಯಾ ತಮ್ಮ ನೆಲದ ಮೇಲಿನ ಪ್ರೀತಿಯನ್ನು ತೋರಿಸಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top