fbpx
ಸಮಾಚಾರ

SBM ಸಂಸ್ಥಾಪಕ ವಿಶ್ವೇಶ್ವರಯ್ಯ ಅವರನ್ನು ಕಡೆಗಣಿಸಿದ SBIಅನ್ನು ತರಾಟೆಗೆ ತೆಗೆದುಕೊಂಡ ಸಂಸದ ಜಿಸಿ ಚಂದ್ರಶೇಖರ್

ಕಳೆದ ವರ್ಷ ತನ್ನ ಅಧೀನ ಬ್ಯಾಂಕುಗಳನ್ನು ತನ್ನೊಂದಿಗೆ ವಿಲೀನ ಮಾಡಿಕೊಂಡ ನಂತರದಿಂದ ಸರ್ವಾಧಿಕಾರಿ ದೋರಣೆ ತೋರುತ್ತಿರುವ, ಸರ್ಕಾರೀ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಂದು ಹೆಸರು ಪಡೆದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿಬರುತ್ತಲೇ ಇವೆ.. ಪ್ರತಿಯೊಂದು ಬ್ಯಾಂಕಿಗೂ ತನ್ನದೇ ಆದ ವಿಶಿಷ್ಟ ಪ್ರಾದೇಶಿಕ – ಭೌಗೋಳಿಕ, ಭಾಷಾ,ಸಂಸðತಿ ಮತ್ತು ಕಾರ್ಯ ವೈಖರಿಯ ಹಿನ್ನೆಲೆ ಇರುತ್ತದೆ. ಆದರೆ ವಿಲೀನ ಆದ ನಂತರ ಅಧೀನ ಬ್ಯಾಂಕುಗಳಿಗೆ ಸಂಭಂದಿಸಿದ ವಿಚಾರಗಳನ್ನು ಕಡೆಗಣಿಸುತ್ತಿದೆ ಎಂಬ ಆರೋಪವೊಂದು ಚಾಲ್ತಿಯಲ್ಲಿದೆ..

 

 

ಹೀಗಿರುವಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಂಸ್ಥಾಪಕ ವಿಶ್ವೇರಯ್ಯ ಅವರ ಫೋಟೋವನ್ನು SBI ಬ್ಯಾಂಕಿನಲ್ಲಿ ಮೂಲೆಯಲ್ಲಿ ಇಟ್ಟಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು SBM ಸಂಸ್ಥಾಪಕರಾದ ವಿಶ್ವೇಶ್ವರಯ್ಯ ಅವರನ್ನು SBI ಕಡೆಗಣಿಸುತ್ತಿದೆ ಎಂದು ಕನ್ನಡಿಗರು ಟೀಕಿಸುತ್ತಿದ್ದಾರೆ.

ಈ ಬಗ್ಗೆ ಸಂಸದ ಜಿಸಿ ಚಂದ್ರಶೇಖರ್ ಅವರು ಕೂಡ ಈ ಬಗ್ಗೆ ಟೀಕಿಸಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಿ ಬದಲಾಗಿರುವ ಶಾಖೆಯಲ್ಲಿ ಕಂಡ ಫೋಟೋವಿದು. ಹಿಂದಿಯನ್ನು ಬರಮಾಡಿಕೊಂಡಿದ್ದಕ್ಕೆ ಮುಂದೊಂದು ದಿನ ಕನ್ನಡಕ್ಕೂ ಇದೆ ಪರಿಸ್ಥಿತಿ ಬರುತ್ತಾ! ಎಸ್‌ಬಿಐನೊಂದಿಗೆ ವಿಲೀನಗೊಂಡ ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಂಸ್ಥಾಪಕರಿಗೆ ನೀಡಿದ ಗೌರವವನ್ನು ನೋಡಿ” ಎಂದು ಟ್ವೀಟ್ ಮಾಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ SBI ಬ್ಯಾಂಕ್ ನಲ್ಲಿ ವಿಶ್ವೇಶ್ವರಯ್ಯ ಅವರ ಫೋಟೋವನ್ನು ಮೂಲೆಯಲ್ಲಿ ಇಟ್ಟಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top