fbpx
ಸಮಾಚಾರ

ಸುದೀಪ್ ಈಗ ನಟನ ಚತುರಾಧಿಪತಿ :ಕಿಚ್ಚನ ಮುಡಿಗೆ ಮತ್ತೊಂದು ಬಿರುದು!

ಅಭಿನಯ ಚಕ್ರವರ್ತಿ ಎಂಬುದು ನಟ ಸುದೀಪ ಅವರಿಗೆ ಇರುವ ಬಿರುದು ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಇದರ ಜೊತೆಗೆ ಬಾದ್ ಷಾ, ಸ್ಯಾಂಡಲ್ ವುಡ್ ಹೆಬ್ಬುಲಿ, ಆರಡಿ ಕಟೌಟ್, ಆಲ್ ಇಂಡಿಯಾ ಕಟ್ ಔಟ್, ಸ್ಟೈಲಿಶ್ ಕಿಂಗ್, ಕಲಾಭೂಷಣ, ಬಿಗ್ ಬಾಸ್ ಸೇರಿದಂತೆ ಅನೇಕ ಬಿರುದುಗಳು ಕೂಡ ಸುದೀಪ್ ಅವರಿಗೆ ಒಲಿದಿವೆ. ಆದಾಗ್ಯೂ ಅವರ ಅಭಿಮಾನಿಗಳು ಮಾತ್ರ ಅವರನ್ನು ಪ್ರೀತಿಯಿಂದ ‘ಕಿಚ್ಚ’ ಎಂತಲೇ ಕರೆಯುತ್ತಾರೆ.

 

 

ಈ ಎಲ್ಲ ಬಿರುದುಗಳ ಮಧ್ಯೆ ಸುದೀಪ್ ಅವರಿಗೆ ಮತ್ತೊಂದು ಬಿರುದು ಒಲಿದು ಬಂದಿದೆ. ‘ಹೆಬ್ಬುಲಿ ಹುಡ್ಗೀರು’ ಹೆಸರಿನ ಅಭಿಮಾನಿ ಸಂಘಟನೆಯೊಂದು ಕಿಚ್ಚ ಸುದೀಪ್​ಗೆ ನಟನ ಚತುರಾಧಿಪತಿ ಅಂತಾ ಬಿರುದು ಕೊಟ್ಟು, ಸನ್ಮಾನ ಮಾಡಿದೆ. ಕಿಚ್ಚನಿಗೆ ನಟನ ಚತುರಾಧಿಪತಿ ಬಿರುದು ನೀಡಿ ಸನ್ಮಾನ ಮಾಡಿರುವ ಫೋಟೋಗಳು ಟ್ವಿಟ್ಟರ್ ನಲ್ಲಿ ವೈರಲ್ ಆಗಿವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top