fbpx
ಸಮಾಚಾರ

ಯಶ್-ರಾಧಿಕಾ​ ಮಗಳು ಆಯ್ರಾ ನಾಡಿನ ಜನತೆಗೆ ದೀಪಾವಳಿ ಶುಭಾಶಯ ತಿಳಿಸಿದ ವಿಡಿಯೋ ನೋಡಿ

ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಜೋಡಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಅದರಲ್ಲೂ ಮಗಳು ಐರಾಳ ಮುದ್ದಾದ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಐರಾ ಎಲ್ಲರಿಗೂ ದೀಪಾವಳಿ ವಿಶ್ ಮಾಡಿರುವ ವಿಡಿಯೋವನ್ನು ಯಶ್ ಹಂಚಿಕೊಂಡಿದ್ದಾರೆ.

 

 

ಯಶ್ ದೀಪಾವಳಿ ಶುಭಾಶಯ ಕೋರುವ​ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ಮೊದಲು ಯಶ್​ ‘ಹ್ಯಾಪ್ಪಿ ದೀಪಾವಳಿ ಮಗಳೆ’ ಎಂದಿದ್ದಾರೆ. ನಂತರ ರಾಧಿಕಾ ಪಂಡಿತ್​, ‘ಹ್ಯಾಪ್ಪಿ ದೀಪಾವಳಿ’ ಎಂದಿದ್ದಾರೆ. ಈ ವೇಳೆ ಆಯ್ರಾ ತನ್ನದೇ ಮುಗ್ಧ ಭಾಷೆಯಲ್ಲಿ ದೀಪಾವಳಿ ಶುಭಾಶಯ ಕೋರಿದ್ದಾರೆ.

 

 

ಇನ್ನು ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಜೋರಾಗಿದೆ. ಮಳೆಯ ನಡುವೆಯೂ ದೀಪಾವಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಅದರಂತೆ ಗಣ್ಯರು ದೀಪಾವಳಿ ಸಂಭ್ರಮಕ್ಕೆ ವಿಶ್ ಮಾಡುತ್ತಿದ್ದಾರೆ. ಅಂತೆಯೇ ರಾಕಿಂಗ್ ಸ್ಟಾರ್​ ಯಶ್ ದಂಪತಿ ಕೂಡ ಹಬ್ಬಕ್ಕೆ ಶುಭ ಕೋರಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top