fbpx
ಸಮಾಚಾರ

ಡೈಲಾಗ್ ಟ್ರೊಲ್ ಮಾಡಿದವರಿಗೆ ಖಡಕ್ ತಿರುಗೇಟು ಕೊಟ್ಟ ರಶ್ಮಿಕಾ!

ನಟಿ ರಶ್ಮಿಕಾ ಮಂದಣ್ಣ ಕೊಡಗಿನ ಕುವರಿ. ಅವರು ಕನ್ನಡದಲ್ಲಿ ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ ಆದರೂ, ಅವರು ಕನ್ನಡದ ಬಗ್ಗೆ ಆಗಾಗ ಮಾತು ಜಾರುತ್ತಿರುತ್ತಾರೆ. ಇದರಿಂದಲೇ ಅವರು ಸಾಕಷ್ಟು ಸಲ ಟ್ರಾಲ್​ ಆಗಿದ್ದೂ ಇದೆ. ಈಗಲೂ ಸಹ ಅದೇ ಆಗಿದ್ದು ಪೊಗರು ಸಿನಿಮಾದ ಡೈಲಾಗ್ ಒಂದನ್ನು ಇಟ್ಟುಕೊಂಡು ರಶ್ಮಿಕರನ್ನು ಟ್ರೊಲ್ ಮಾಡಲಾಗುತ್ತಿದೆ.

 

 

ನಿನ್ನೆಯಷ್ಟೆ ‘ಪೊಗರು’ ಚಿತ್ರದ ಡೈಲಾಗ್​ ಟ್ರೈಲರ್​ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ಟ್ರೈಲರ್​ನಲ್ಲೂ ರಶ್ಮಿಕಾ ಇಂಗ್ಲಿಷ್​ನಲ್ಲಿ ಹೇಳುವ ಡೈಲಾಗ್​ಗೆ ನಾಯಕ ಆ್ಯಕ್ಷನ್ ಪ್ರಿನ್ಸ್​ ಧ್ರುವಾ ಸರ್ಜಾ “ಮಾತೃಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು” ಎಂದು ಹೇಳುವ ಡೈಲಾಗ್ ಗೆ ನಟ್ಟಿಗರು ಕಾಲೆಳೆಯುತ್ತಿದ್ದಾರೆ. ಈ ಡೈಲಾಗ್ ರಶ್ಮಿಕಾ ಅವರಿಗಾಗಿಯೇ ಬರೆದ ಹಾಗೆ ಇದೆ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

 

 

ಇದರಿಂದ ರೊಚ್ಚಿಗೆದ್ದ ರಶ್ಮಿಕಾ, “ಈ ಡೈಲಾಗ್ ಅನ್ನು ಯಾಕೆ ಇಟ್ಟಿದ್ದೇವೆ ಎಂದು ನಾವು ಈಗ ಚರ್ಚೆ ಮಾಡುತ್ತಿದ್ದೇವೆ. ತುಂಬಾ ಜನರು ರಶ್ಮಿಕಾ ಮಂದಣ್ಣ (ಒಳ್ಳೆಯ ಅಥವಾ ಕೆಟ್ಟದರ) ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ರಶ್ಮಿಕಾ ಗೆದ್ದಳು ಎಂದು ಅರ್ಥ. ನನ್ನ ಬಗ್ಗೆ ಯೋಚಿಸಲು ನಿಮ್ಮ ಸಮಯವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು” ಎಂದು ವ್ಯಕ್ತಿಯೊಬ್ಬನ ಟ್ವೀಟ್‍ಗೆ ರೀ-ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top